HEALTH TIPS

ಕಾರಡ್ಕ ರಾಘವ ಬಲ್ಲಾಳ್ ಸುವರ್ಣ ಸಂಭ್ರಮ; ಪ್ರಶಸ್ತಿ ಪ್ರದಾನ

   

                  ಮುಳ್ಳೇರಿಯ: ಹಿರಿಯ ಯಕ್ಷಗಾನ ಕಲಾವಿದರೂ, ಯಕ್ಷಗಾನ ಹಿಮ್ಮೇಳ ಗುರುಗಳೂ ಆಗಿರುವ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ,  ಯಕ್ಷರತ್ನ ರಾಘವ ಬಲ್ಲಾಳ್ ಕಾರಡ್ಕ ಅವರ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ವಿವಿಧ ರಂಗಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ಶಿಷ್ಯರ ರಂಗಪ್ರವೇಶ ಕಾರ್ಯಕ್ರಮವು ಮುಂಡೋಳು ಶ್ರೀ ಕ್ಷೇತ್ರ ಸಭಾಭವನದಲ್ಲಿ ನಡೆಯಿತು.

                  ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಮುಂಡೋಳು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಬಿ. ರಘುರಾಮ ಬಲ್ಲಾಳ್, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಬ್ಬಣಕೋಡಿ ರಾಮ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

     ಶ್ರೀದೇವಿ ಮಾಧವ ಭಟ್ ನಾಯಿತ್ತೋಡು, ಉದಯಕುಮಾರ್ ಕಲ್ಲೂರಾಯ ಮಧೂರು ಅವರಿಗೆ ಲಕ್ಷ್ಮೀ ಅಮ್ಮ ಚಂದ್ರ ಬಲ್ಲಾಳ್ ಪ್ರಶಸ್ತಿಯನ್ನು ನೀಡಲಾಯಿತು. ಪುಂಡೂರು ವಾಮದೇವ ಪುಣಿಂಚಿತ್ತಾಯ ಅವರಿಗೆ ನಾಯಿತ್ತೋಡು ಮಾಧವ ಭಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೂರ್ಯನಾರಾಯಣ ಭಟ್ ಪೈಕೆ ಅವರಿಗೆ ಕಲಾರಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶ್ರೀ ವಿಷ್ಣುಮೂರ್ತಿ ಹಿಮ್ಮೇಳ ತರಬೇತಿ ಕೇಂದ್ರ ಬಜ ಇವರಿಂದ ಗುರುಗಳಾದ ರಾಘವ ಬಲ್ಲಾಳ್ ಕಾರಡ್ಕ ಅವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

    ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಯಕ್ಷಗಾನದ ಭಾಗವತ, ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ, ಯಕ್ಷಗಾನ ಭಾಗವತರಾದ ಹೊಸಮೂಲೆ ಗಣೇಶ್ ಭಟ್, ಶಿಕ್ಷಕರು ಮತ್ತು ಯಕ್ಷಗಾನ ಭಾಗವತರೂ ಆದ ಡಾ.ಸತೀಶ ಕುಮಾರ್.ಪಿ.ಎಸ್, ಯಕ್ಷಗಾನ ಭಾಗವತರಾದ ಡಾ.ಸತ್ಯನಾರಾಯಣ ಪುಣಿಂಚಿತ್ತಾಯ, ಶಿಕ್ಷಕ ಮತ್ತು ಭಾಗವತರೂ ಆದ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಭಾಗವತರಾದ ಎ.ಬಿ.ಮನೋಹರ ಬಲ್ಲಾಳ್, ಹಿಮ್ಮೇಳ ವಾದಕ ಚಿಪ್ಪಾರು ಮರಿಯಯ್ಯ ಬಲ್ಲಾಳ್, ಹಿಮ್ಮೇಳ ವಾದಕರಾದ ಅಂಬೆಮೂಲೆ ಶಿವಶಂಕರ ಭಟ್, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಕ್ಷಗಾನದ ನಾಟ್ಯ ಗುರು ಸಬ್ಬಣಕೋಡಿ ರಾಮ ಭಟ್ ಮತ್ತು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ಯಕ್ಷಗಾನ ಮತ್ತು ನಾಟಕ ಕಲಾವಿದರೂ ಆದ ಯತೀಶ್ ಕುಮಾರ್ ರೈ ಅವರನ್ನು ಕಾರಡ್ಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಗೋಳಿಕಟ್ಟೆ ಶಶಿಕಿರಣ ಬಲ್ಲಾಳ್ ಮತ್ತು ಚಂದ್ರ ಶೇಖರ ಬಲ್ಲಾಳ್ ಅವರಿಗೆ ವಿಶೇಷ ಗೌರವಾರ್ಪಣೆ ಮಾಡಲಾಯಿತು. 

             ಶಿಕ್ಷಕಿ ಜ್ಯೋತ್ಸ್ನ ಕಡಂದೇಲು ಸ್ವಾಗತಿಸಿದರು. ಸುವರ್ಣ ಸಂಭ್ರಮ ಸಮಿತಿ ಕೋಶಾಧಿಕಾರಿ ಶಿವಪ್ಪ ಮಾಸ್ಟರ್ ವಂದಿಸಿದರು. ಯತೀಶ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.

             ಕಾರ್ಯಕ್ರಮದ ಅಂಗವಾಗಿ ಪೆರ್ಲ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದವರಿಂದ ಮೇದಿನಿ ನಿರ್ಮಾಣ-ಮಹಿಷ ವಧೆ-ಶಾಂಭವಿ ವಿಲಾಸ ಎಂಬ ಯಕ್ಷಗಾನ ಬಯಲಾಟ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries