ಗುರುವಾಯೂರು: ಗುರುವಾಯೂರು ವಿಶೇಷ ಏಕಾದಶಿ ದಿನದಂಗವಾಗಿ ನಿನ್ನೆ ಶ್ರೀಕೃಷ್ಣನ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿ ಕಣ್ತುಂಬಿಕೊಂಡರು. ಕೊರೊನಾ ಯುಗದ ಸಂಕಷ್ಟದ ನಡುವೆಯೂ ಗುರುವಾಯೂರಪ್ಪನ ಕಣ್ತುಂಬಿಕೊಳ್ಳಲು ಭಕ್ತರು ಕಾತರಿಸಿದರು. ಗರಿಷ್ಠ ರಿಯಾಯಿತಿಗಳೊಂದಿಗೆ, ಕಣ್ಣನನ್ನು ವೀಕ್ಷಿಸಲು ಮತ್ತು ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಭಕ್ತರು ದೇವಾಲಯಕ್ಕೆ ಆಗಮಿಸಿದರು.
ಯಾವುದೇ ನಿರ್ಬಂಧಗಳಿಲ್ಲದೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ಬುಕ್ ಮಾಡದವರೂ ದೇಗುಲಕ್ಕೆ ತೆರಳಿ ದರ್ಶನ ಪಡೆದರು. ಕೊರೋನಾ ಹಿನ್ನೆಲೆಯಲ್ಲಿ ಕಳೆದ ಬಾರಿ ಕೈಬಿಡಲಾಗಿದ್ದ ಪ್ರಸಾದ ಊಟವನ್ನು ಈ ಬಾರಿ ನೆರವೇರಿಸಲಾಯಿತು. ಪ್ರಸಾದವನ್ನು ವಿಷೇಷವಾಗಿ ಸಜ್ಜುಗೊಳಿಸಿದ ಟೆಂಟ್ನಲ್ಲಿ ನೀಡಲಾಯಿತು.
ವರ್ಚುವಲ್ ಸರದಿಯಲ್ಲಿ ಬುಕ್ ಮಾಡಿದವರಿಗೆ ಮತ್ತು ತುಪ್ಪದ ದೀಪ ಹರಕೆ ಹೊತ್ತವರಿಗೆ ಮಾತ್ರ ಭೇಟಿಯನ್ನು ಅನುಮತಿಸಲಾಗಿದೆ. ಏಕಾದಶಿಯಂದು ಆನ್‍ಲೈನ್‍ನಲ್ಲಿ ಬುಕ್ ಮಾಡುವ ಮೂಲಕ ಗರಿಷ್ಠ 10,000 ಜನರಿಗೆ ಸೇವೆ ನೀಡಲು ನಿರ್ಧರಿಸಲಾಗಿತ್ತು.
ಮಧ್ಯಾಹ್ನ ಸ್ವರ್ಣ ಮಂಟಪದಲ್ಲಿ ಪಾರ್ಥಸಾರಥಿ ದೇವಸ್ಥಾನಕ್ಕೆ ಶ್ರೀಕೃಷ್ಣನ ಆರೋಹಣ ನೆರವೇರಿತು. ಮೂರು ಆನೆಗಳು ಪಾಲ್ಗೊಂಡಿದ್ದವು. ಈ ಹಿಂದೆ ಏಕಾದಶಿಯ ಆಚರಣೆಗಳು ಮತ್ತು ಇತರ ವಿಧಿವಿಧಾನಗಳÀನ್ನು ಕೋವಿಡ್ ಹಿನ್ನಯಲ್ಲಿ ನಿರ್ಬಂಧಿಸಿದ ಕಾರಣ ಎರಡು ವರ್ಷಗಳ ಬಳಿಕ ನಿನ್ನೆ ಮುಕ್ತ ಅವಕಾಶ ನೀಡಿದ ಕಾರಣ ಭಕ್ತರು ವೀಕ್ಷಿಸಿ ಹರ್ಷಗೊಂಡರು.