ಕೊಚ್ಚಿ: ಶಬರಿಮಲೆ ಕರ್ತವ್ಯಕ್ಕೆ ಹಾಜರಾಗದ ದೇವಸ್ವಂ ಮಂಡಳಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ. ಈ ಸಂಬಂಧ ನ್ಯಾಯಾಲಯ ದೇವಸ್ವಂ ಮಂಡಳಿಗೆ ನಿರ್ದೇಶನ ನೀಡಿದೆ. ವಿನಾಕಾರಣ ಕರ್ತವ್ಯ ಲೋಪ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಶೇಷ ಆಯುಕ್ತರ ವರದಿಯನ್ನು ಆಧರಿಸಿ ಹೈಕೋರ್ಟ್ ಈ ಆದೇಶ ನೀಡಿದೆ.
ಇದೇ ವೇಳೆ ಶಬರಿಮಲೆ ಸನ್ನಿಧಾನದಲ್ಲಿ ರಾತ್ರಿ ತಂಗುವ ಯಾತ್ರಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ದೇವಸ್ವಂ ಮಂಡಳಿ ನಿರ್ಧರಿಸಿತ್ತು. ಭಕ್ತರಿಗೆ ವಿಶ್ರಮಿಸಲು ಹೆಚ್ಚಿನ ಸ್ಥಳಗಳನ್ನು ಸಿದ್ಧಪಡಿಸಲಾಗುವುದು. ಶಬರಿಮಲೆ ಸನ್ನಿಧಾನದಲ್ಲಿ ಪ್ರಸಾದ ವಿತರಣೆಯ ಸಮಯವನ್ನು ಹೆಚ್ಚಿಸಲಾಗಿದೆ.
ಮಂಡಲ ಬೆಳಕು ಉತ್ಸವಕ್ಕೆ 6.55 ಲಕ್ಷ ಅಯ್ಯಪ್ಪ ಭಕ್ತರು ಪಾದಯಾತ್ರೆ ಮೂಲಕ ಶಬರಿಮಲೆ ತಲುಪಿದ್ದಾರೆ. ಇದುವರೆ `47 ಕೋಟಿ ಒಟ್ಟು ಆದಾಯ ಬಂದಿದೆ. ಈ ಪೈಕಿ ಕಾಣಿಕೆ ರೂಪದಲ್ಲಿ 14 ಕೋಟಿ ರೂ. ಮತ್ತು ಅರವಣ ಪ್ರಸಾದದ ಮೂಲಕ 18 ಕೋಟಿ ರೂ ಆದಾಯ ಲಭಿಸಿದೆ.