ಕಾಸರಗೋಡು: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಾಸರಗೋಡು ಜಿಲ್ಲಾ ಕಚೇರಿಯನ್ನು ಕಾಞಂಗಾಡ್‍ನ ಕಾರಾಟುವಯಲ್ ರಸ್ತೆಯ ಮೇಧಾ ಅಪಾರ್ಟ್‍ಮೆಂಟ್‍ನಲ್ಲಿ ತೆರೆಯಲಾಗಿದೆ. ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕೆ.ಎಸ್.ಸಲೀಖಾ ಅಧ್ಯಕ್ಷತೆ ವಹಿಸಿದ್ದರು. ಸಾಲ ಮೇಳವನ್ನು ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಕಾಞಂಗಾಡು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಬಾಲರಾಜ್, ವಿ.ವಿ.ರಮೇಶನ್, ಸಿ.ಜಾನಕಿಕುಟ್ಟಿ, ಕುಟುಂಬಶ್ರೀ ಅಧ್ಯಕ್ಷೆ ಟಿ.ವಿ.ಪ್ರೇಮಾ, ಕೆ.ಸುಜಿನಿ, ಕೆ.ಪಿ.ಬಾಲಕೃಷ್ಣನ್, ಕೆ.ಸಿ.ಪೀಟರ್, ಅಬ್ದುಲ್ ಮುತ್ತಲಿಬ್, ಕೃಷ್ಣನ್ ಪಾಣನಕಾವು, ಪಿ.ಪಿ.ರಾಜು, ಪಿ.ಟಿ.ನಂದಕುಮಾರ್, ಕೈಪ್ರತ್ ಕೃಷ್ಣನ್ ನಂಬಿಯಾರ್, ರತೀಶ್ ಪುದಿಯಪುರ, ರವಿ ಕುಳಂಗರ, ಅಬ್ರಹಾಂ ಮಾತನಾಡಿದರು. . ವ್ಯವಸ್ಥಾಪಕ ನಿರ್ದೇಶಕಿ ವಿ.ಸಿ.ಬಿಂದು ಸ್ವಾಗತಿಸಿ, ಪ್ರಾದೇಶಿಕ ವ್ಯವಸ್ಥಾಪಕ ಕೆ.ಫೈಸಲ್ ಮುನೀರ್ ವಂದಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಮಹಿಳಾ ಅಭಿವೃದ್ಧಿ ನಿಗಮವು ಮಹಿಳೆಯರ ಸರ್ವಾಂಗೀಣ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತದೆ. ಸಮಾಜದಲ್ಲಿ ಹಿಂದುಳಿದಿರುವ ಮಹಿಳೆಯರ ಉನ್ನತಿ ಮತ್ತು ಸಬಲೀಕರಣಕ್ಕಾಗಿ ಮಹಿಳೆಯರು ಪ್ರಾರಂಭಿಸಿದ ಉಪಕ್ರಮಗಳನ್ನು ಉತ್ತೇಜಿಸಲು ಸರಳ ನಿಬಂಧನೆಗಳೊಂದಿಗೆ ಸ್ವಯಂ ಉದ್ಯೋಗ ಸಾಲಗಳು, ಕಿರುಬಂಡವಾಳ ಸಾಲಗಳು ಮತ್ತು ಶಿಕ್ಷಣ ಸಾಲಗಳನ್ನು ಒದಗಿಸುತ್ತದೆ. ಮಹಿಳೆಯರ ಅಭ್ಯುದಯಕ್ಕಾಗಿ ಸಹಾಯವಾಣಿ ಯೋಜನೆ, ವೃತ್ತಿಪರ ಗ್ರೂಮಿಂಗ್ ಅಕಾಡೆಮಿ, ಶೀಪಾದ್ ಯೋಜನೆ ಮತ್ತು ವನಮಿತ್ರದಂತಹ ವಿವಿಧ ಯೋಜನೆಗಳನ್ನು ಸಹ ಜಾರಿಗೊಳಿಸಲಾಗುತ್ತಿದೆ. ಮಹಿಳೆಯರು ಸ್ವಾವಲಂಬಿಯಾಗಲು ಸÀರ್ಕಾರ ಹಮ್ಮಿಕೊಂಡಿರುವ ಯೋಜನೆಗಳು ಸೇರಿದಂತೆ ಜಿಲ್ಲೆಯಲ್ಲಿ ನಿಗಮದ ವಿವಿಧ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ನೂತನ ಕಚೇರಿಯನ್ನು ಆರಂಭಿಸಲಾಗಿದೆ.