ಕಾಸರಗೋಡು: ನಿತ್ಯೋಪಯೋಗಿ ಸಾಮಾಗ್ರಿಗಳ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸಪ್ಲೈಕೋ ಸೇವೆ ಮನೆಯಂಗಳಕ್ಕೆ ತಲಪುತ್ತಿದೆ. ಸಂಸ್ಥೆಯ ಸಂಚರಿಸುವ ಮಾರಾಟ ಮಳಿಗೆಗಳ ಪರ್ಯಟನೆ ಮಂಗಳವಾರ ಆರಂಭಗೊಂಡಿದೆ.
ಆಹಾರ ಸಚಿವ ಜಿ.ಆರ್.ಅನಿಲ್ ರಾಜ್ಯ ಮಟ್ಟದ ಪರ್ಯಟನೆಗೆ ಚಾಲನೆ ನೀಡಿದರು. ಕಾಸರಗೋಡು ಜಿಲ್ಲೆಯ ಕಯ್ಯೂರಿನಲ್ಲಿ ಶಾಸಕ ಎಂ.ರಾಜಗೋಪಾಲನ್, ಬಂದ್ಯೋಡು ಪೇಟೆಯಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಉಪಾಧ್ಯಕ್ಷ ಪಿ.ಕೆ.ಮುಹಮ್ಮದ್ ಹನೀಫ, ಕಾಸರಗೋಡು ತಾಲೂಕಿನಲ್ಲಿ ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್,ವೆಳ್ಳರಿಕುಂಡ್ ತಾಲೂಕು ಮಟ್ಟದಲ್ಲಿ ಕೋಡೋಂ-ಬೇಳೂರು ಪಂಚಾಯತ್ ಉಪಾಧ್ಯಕ್ಷ ಪಿ.ದಾಮೋದರನ್ ಪರ್ಯಟನೆಗೆ ಹಸುರುನಿಶಾನೆ ತೋರಿದರು.
ಡಿ.1ರಂದು ಪರ್ಯಟನೆ ನಡೆಯುವ ಕೇಂದ್ರಗಳು ಮತ್ತು ಸಮಯ:
ಕಾಸರಗೋಡು ತಾಲೂಕು: ಪೆÇಯಿನಾಚಿ(ಬೆಳಗ್ಗೆ 8.), ಪೆರ್ಲಡ್ಕ(9.30.), ಮುನ್ನಾಡು(ಮಧ್ಯಾಹ್ನ 12.15), ಪಡ್ಪು(2.30.), ಬಂದಡ್ಕ(4.30.),
ಮಂಜೇಶ್ವರ ತಾಲೂಕು: ಮೊರತ್ತಣೆ(ಬೆಳಗ್ಗೆ8.), ದೈಗೋಳಿ(10.), ಕುಜತ್ತೂರು(ಮಧ್ಯಾಹ್ನ 12.15.),ಹೊಸಂಗಡಿ(3.30.)