ಕುಂಬಳೆ: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಅಂಗವಾಗಿ ಕುಂಬಳೆ ಪ್ರಾದೇಶಿಕ ಡೈರಿ ಲ್ಯಾಬ್‍ನಲ್ಲಿ ಡೈರಿ ತರಬೇತಿ ಕೇಂದ್ರ ಹಾಸ್ಟೆಲ್ ಸಂಕೀರ್ಣವನ್ನು ರಾಜ್ಯ ಪಶುಸಂಗೋಪನೆ ಮತ್ತು ಡೈರಿ ಸಚಿವೆ ಚಿಂಚುರಾಣಿ ಉದ್ಘಾಟಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಿಂದ 163 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡವು ರೈತರಿಗೆ ಉಳಿಯಲು ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು. ಏಕಕಾಲಕ್ಕೆ 75 ರೈತರು ಉಳಿದು ತರಬೇತಿ ಪಡೆಯುವ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಈ ತರಬೇತಿ ಕೇಂದ್ರವನ್ನು ಜಿಲ್ಲೆಯ ರೈತರು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೈನುಗಾರಿಕಾ ಅಭಿವೃದ್ಧಿ ನಿರ್ದೇಶಕ ವಿ.ಪಿ.ಸುರೇಶ್ ಕುಮಾರ್, ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಿ.ಎ.ಸೈಮಾ, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದೀಕ್, ಕುಂಬಳೆ ಪಂಚಾಯತಿ ಸದಸ್ಯ ಎಂ.ಅಜಯ್, ಏತಡ್ಕ ಡೈರಿ ಗ್ರೂಪ್ ಅಧ್ಯಕ್ಷ ಶಂಕರನಾರಾಯಣ ರಾವ್ ಮಾತನಾಡಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜಮೋಹನ್ ಸ್ವಾಗತಿಸಿ ಆರ್‍ಡಿಎಲ್ ಕಾಸರಗೋಡು ಉಪನಿರ್ದೇಶಕ ವರ್ಕಿ ಜಾರ್ಜ್ ವಂದಿಸಿದರು.