ಕಾಸರಗೋಡು: ಕಾಸರಗೋಡಿನ ಕನ್ನಡಿಗರು ದಕ್ಷಿಣ ಕನ್ನಡದ ಸಾಹಿತ್ಯ ಪರಿಷತ್ತಿನ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಕಾಸರಗೋಡಿನ ಕನ್ನಡಿಗರ ಎಲ್ಲಾ ಸಮಸ್ಯೆಗಳಿಗೆ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಸ್ಪಂದಿಸುತ್ತದೆ. ಕಾಸರಗೋಡಿನವರೇ ಆದ ಕೀಕಾನ ರಾಮಚಂದ್ರ ಅವರು ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದರು.
ಅವರು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದಲ್ಲಿ ಭಾನುವಾರ ಸಂಜೆ ಜರಗಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ಒಲವಿರುವ ಎಲ್ಲರೂ ಸಾಹಿತ್ಯ ಪರಿಷತ್‍ನಲ್ಲಿ ಸದಸ್ಯರಾಗಬೇಕೆಂದು ಕರೆ ನೀಡಿದರು. ಇದೇ ಸಂದಭರ್Àದಲ್ಲಿ ಅವರು ಸಾಹಿತ್ಯ ಪರಿಷತ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದರು.
ಕನ್ನಡ ಭವನದ ಅಧ್ಯಕ್ಷ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಮಾತನಾಡಿ ಸಾಹಿತ್ಯ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಘ ಸಂಸ್ಥೆಗಳೊಂದಿಗೆ ಗಡಿನಾಡು ಕನ್ನಡಿಗರು ಸಕ್ರಿಯವಾಗಿ ಸ್ಪಂದಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕಾಸರಗೋಡು ಕನ್ನಡಿಗರ ಪರವಾಗಿ ವಾಮನ್ ರಾವ್ ಬೇಕಲ್ ಮತ್ತು ಅಧ್ಯಾಪಕಿ ಸಂಧ್ಯಾರಾಣಿ ದಂಪತಿಗಳು ಡಾ.ಎಂ.ಪಿ.ಶ್ರೀನಾಥ್ ಅವರಿಗೆ ಶಾಲು ಹೊದಿಸಿ, ಪುಸ್ತಕ ಹಾರ, ಸ್ಮರಣಿಕೆ ನೀಡಿ ಅಭಿನಂದಿಸಿದರು. ಉಪನ್ಯಾಸಕ ಪ್ರಮೋದ್, ಪಂಚಾಯತಿ ಸದಸ್ಯ ಹರೀಶ್ ಗೋಸಾಡ, ಪೆÇ್ರ.ಎ.ಶ್ರೀನಾಥ್ ಕಾಸರಗೋಡು, ವಿಷ್ಣು ಶ್ಯಾನುಭೋಗ್, ಲೋಕೇಶ್ ಶೆಟ್ಟಿ, ವಸಂತ ಬಾರಡ್ಕ, ಪುರುಷೋತ್ತಮ ಭÀಟ್, ಅಖಿಲೇಶ್ ನಗುಮುಗಂ ಮೊದಲಾದವರು ಉಪಸ್ಥಿತರಿದ್ದರು.
ವೀಜಿ ಕಾಸರಗೋಡು ಸ್ವಾಗತಿಸಿ, ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಕೋಟೆಕಣಿ ವಂದಿಸಿದರು.