ಕಾಸರಗೋಡು: ಬೇಕಲ ಬಿ.ಆರ್. ಸಿ ನೇತೃತ್ವದಲ್ಲಿ ವೇಲೇಶ್ವರಂ ಇ. ಎಂ.ಎಸ್.ಸ್ಮಾರಕ ಗ್ರಂಥಾಲಯವು ಪ್ರತಿಭಾ ಕೇಂದ್ರದ ಮಕ್ಕಳಿಗಾಗಿ 'ಉಳಿವು' ಪ್ರತಿಭೋತ್ಸವವನ್ನು ಹಮ್ಮಿಕೊಂಡಿತ್ತು. ಪ್ರತಿಭೋತ್ಸವದಲ್ಲಿ ಮಕ್ಕಳಿಂದÀ ರೇಖಾಚಿತ್ರ ರಚನೆ, ಕಾಗದದ ಕರಕುಶಲ ವಸ್ತುಗಳ ನಿರ್ಮಾಣ, ನಿಯತಕಾಲಿಕೆಗಳು ಮತ್ತು ಇತರ ನಿರ್ಮಾಣ ಕಾರ್ಯಗಳ ಪ್ರದರ್ಶನವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮವನ್ನು ಅಜಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ ಉದ್ಘಾಟಿಸಿದರು. ಅಜಾನೂರು ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಬಾ ಉಮ್ಮರ್ ಅಧ್ಯಕ್ಷತೆ ವಹಿಸಿದ್ದರು. ಬೇಕಲ್ ಉಪಜಿಲ್ಲಾ ವಿದ್ಯಾಧಿಕಾರಿ ಕೆ. ಶ್ರೀಧರನ್ ಮುಖ್ಯ ಅತಿಥಿಯಾಗಿದ್ದರು. ಡಿ.ಪಿ. ಓ. ಎಸ್.ಎಸ್. ಕೆ. ಕೆ.ಪಿ.ರಂಜಿತ್ ಯೋಜನೆಯ ಕುರಿತು ವಿವರಿಸಿದರು. ಅಜಾನೂರು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಕೃಷ್ಣನ್, ಹಸಿರು ಕೇರಳ ಮಿಷನ್ ಜಿಲ್ಲಾ ಸಂಯೋಜಕ ಪಿ.ಸುಬ್ರಹ್ಮಣ್ಯಂ, ತಾಲೂಕು ಗ್ರಂಥಾಲಯ ಕೌನ್ಸಿಲ್ ಸದಸ್ಯ ಪಿ. ಕೃಷ್ಣನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನ್ಯಾಯವಾದಿ. ಎ.ಗಂಗಾಧರನ್, ಎಸ್.ಎಂ. ಸಿ ಅಧ್ಯಕ್ಷ ಪಿ.ವಿ. ಅಜಯನ್, ತಾ.ಪಂ.ಅಧ್ಯಕ್ಷೆ ಕೆ.ರಜಿತಾ, ಹಿರಿಯ ಸಹಾಯಕ ಪಿ.ಪಿ.ಜಯಣ್ಣ, ಸಿಬ್ಬಂದಿ ಕಾರ್ಯದರ್ಶಿ ಕೆ.ವಿ. ಶಶಿಕುಮಾರ್, ಇಎಂಎಸ್ ಗ್ರಂಥಾಲಯ ಕಾರ್ಯದರ್ಶಿ ಕೆ. ವಿ ಕುಮಾರನ್, ಸಫ್ದರ್ ಹಾಶ್ಮಿ ಕ್ಲಬ್ ಕಾರ್ಯದರ್ಶಿ ಕೆ ಸುರೇಶ್ ಬೇಕಲ್, ಬಿಆರ್‍ಸಿ ತರಬೇತುದಾರ ಸುನಿಲ್ ಕುಮಾರ್ ವೆಳ್ಳುವ, ವಿಶ್ವಭಾರತಿ ಕ್ಲಬ್ ಅಧ್ಯಕ್ಷ ಕೆ. ರಾಜನ್ ಉಪಸ್ಥಿತರಿದ್ದು ಮಾತನಾಡಿದರು. ಮುಖ್ಯೋಪಾಧ್ಯಾಯ ಸಿಪಿವಿ ವಿನೋದ್ ಕುಮಾರ್ ಸ್ವಾಗತಿಸಿ, ಬಿ.ಆರ್. ಸಿ.ಬೇಕಲ್ ಬ್ಲಾಕ್ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ದಿಲೀಪ್ ಕುಮಾರ್ ವಂದಿಸಿದರು. ಜಾನಪದ ಗಾಯಕ ರವಿ ವಾಣಿಯಂಪಾರ ಮತ್ತು ಬಳಗದವರಿಂದ ಜಾನಪದ ಹಾಡುಗಳು, ಮಕ್ಕಳಿಂದ ಸಾಂಸ್ಕøತಿಕ ವೈವಿಧ್ಯಗಳು, ಮಹಿಳೆಯರಿಂದ ತಿರುವಾದಿರ ನೃತ್ಯಗಳ ಪ್ರದರ್ಶನ ನಡೆಯಿತು.