ಕೊಚ್ಚಿ: ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಗೋಪಿನಾಥ್ ರವೀಂದ್ರನ್ ಅವರ
ಮರುನೇಮಕವನ್ನು ಪ್ರಶ್ನಿಸಿ ಸೆನೆಟರ್ ಹಾಗೂ ಇತರರು ಸಲ್ಲಿಸಿರುವ ಅರ್ಜಿ ಕಾನೂನಾತ್ಮಕವಾಗಿ ಸರಿಯಲ್ಲ ಎಂದು ಹೈಕೋರ್ಟ್ ನ ಏಕ ಪೀಠ ಹೇಳಿದೆ. ಈ ಅರ್ಜಿಯನ್ನು ನ್ಯಾಯಮೂರ್ತಿ ಅಮಿತ್ ರಾವಲ್ ವಿಚಾರಣೆ ನಡೆಸಿದರು. ಗೋಪಿನಾಥ್ ರವೀಂದ್ರನ್ ಅವರ ನೇಮಕವನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ವಿಸಿ ನೇಮಕ ವಿಚಾರವಾಗಿ ತೀವ್ರ ಟೀಕೆ ಹಾಗೂ ವ್ಯಾಪಕ ಪ್ರತಿಭಟನೆ ಎದುರಿಸಿದ್ದ ಪಿಣರಾಯಿ ಸರಕಾರಕ್ಕೆ ಇದರಿಂದ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ. ಈ ಹಿಂದೆಯೇ ಅರ್ಜಿಯ ಪ್ರಾಥಮಿಕ ವಾದಗಳು ಪೂರ್ಣಗೊಂಡಿದ್ದವು. ಕಣ್ಣೂರು ವಿಶ್ವವಿದ್ಯಾನಿಲಯ ಕಾಯ್ದೆ ಮತ್ತು ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ಗೋಪಿನಾಥ್ ರವೀಂದ್ರನ್ ಅವರನ್ನು ವಿಸಿ ಆಗಿ ಮರು ನೇಮಕ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.