ಪತ್ತನಂತಿಟ್ಟ/ಸನ್ನಿಧಾನಂ; ಶಬರಿಮಲೆಯಲ್ಲಿ ಭದ್ರತಾ ಪಡೆಗಳ ಜಂಟಿ ತಪಾಸಣೆ ನಡೆಸಲಾಗಿದೆ. ಸನ್ನಿಧಾನಂನ ವಿವಿಧೆಡೆ ಹಾಗೂ ಅರಣ್ಯ ಪ್ರದೇಶದಲ್ಲಿ ತಪಾಸಣೆ ನಡೆಸಲಾಯಿತು. ಭದ್ರತಾ ವ್ಯವಸ್ಥೆಗಳ ಪರಿಶೀಲನೆ ಭಾಗವಾಗಿ ಈ ತಪಾಸಣೆ ನಡೆದಿದೆ.
ಕೇರಳ ಪೋಲೀಸ್ ಕಮಾಂಡೋಗಳು, ಕ್ಷಿಪ್ರ ಕಾರ್ಯಾಚರಣೆ ಪಡೆ, ಎನ್‍ಡಿಆರ್‍ಎಫ್, ಅರಣ್ಯ ಇಲಾಖೆ ಮತ್ತು ಬಾಂಬ್ ಪತ್ತೆ ದಳದ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. ಸಾರಂಕುಟ್ಟಿ, ಮರಕೂಟಂ, ಬೈಲಿ ಸೇತುವೆ, ಅನ್ನದಾನಮಂಟಪ, ಉರಲ್ಕುಝಿ, ಪಂಡಿತಾವಲಂ ಮತ್ತು ಸನ್ನಿಧಾನಂನಲ್ಲಿ ತಪಾಸಣೆ ನಡೆಸಲಾಯಿತು.
ಸನ್ನಿಧಾನಂ ಪೋಲೀಸ್ ವಿಶೇಷ ಅಧಿಕಾರಿ ಆರ್. ಆನಂದ್, ಉಪ ಕಮಾಂಡೆಂಟ್, ಕ್ಷಿಪ್ರ ಕಾರ್ಯಾಚರಣೆ ಪಡೆ; ವಿಜಯನ್, ಕೇರಳ ಪೆÇಲೀಸ್ ಕಮಾಂಡೋ ವಿಂಗ್ ಸಹಾಯಕ. ಕಮಾಂಡೆಂಟ್ ವಿ.ಜಿ. ಅಜಿತ್ ಕುಮಾರ್ ಹಾಗೂ ಎನ್ ಡಿಆರ್ ಎಫ್ ಇನ್ಸ್ ಪೆಕ್ಟರ್ ಮಂಡಲ್ ನೇತೃತ್ವ ವಹಿಸಿದ್ದರು.