ಸಮರಸ ಚಿತ್ರ ಸುದ್ದಿ: ಕುಂಬಳೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಸಹಯೋಗದಲ್ಲಿ ಕಾಸರಗೋಡು,ಮಂಜೇಶ್ವರ,ಹೊಸದುರ್ಗ ತಾಲೂಕುಗಳ ಭಜನಾ ಅಭಿಮಾನ -ಅಭಿಯಾನ ಕಾರ್ಯಕ್ರಮದಂಗವಾಗಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಮತ್ತು ಗಾಯಕ ರಾಮಕೃಷ್ಣ ಕಾಟುಕುಕ್ಕೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಂಗವಾಗಿ ಬೆದ್ರಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಮಾಧ್ಯಮಶ್ರೀ ಪ್ರಶಸ್ತಿ ವಿಜೇತ ಅಚ್ಯುತ ಚೇವಾರ್ ರವರನ್ನು ಗೌರವಿಸಲಾಯಿತು.