ನವದೆಹಲಿ:ಗೂಗಲ್ ಕ್ರೋಮ್ ಇಂಟರ್ನೆಟ್ ಬ್ರೌಸರ್ ಬಳಕೆದಾರರಿಗೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‍ಟಿ-ಇನ್) ತೀವ್ರ ಮಟ್ಟದ ಅಪಾಯದ ಕುರಿತಾದ ಎಚ್ಚರಿಕೆಯನ್ನು ನೀಡಿದೆ.
ನವದೆಹಲಿ:ಗೂಗಲ್ ಕ್ರೋಮ್ ಇಂಟರ್ನೆಟ್ ಬ್ರೌಸರ್ ಬಳಕೆದಾರರಿಗೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‍ಟಿ-ಇನ್) ತೀವ್ರ ಮಟ್ಟದ ಅಪಾಯದ ಕುರಿತಾದ ಎಚ್ಚರಿಕೆಯನ್ನು ನೀಡಿದೆ.
ಬ್ರೌಸರ್‍ನಲ್ಲಿರುವ ದುರ್ಬಲತೆಗಳಿಗೆ ಗೂಗಲ್ ಈಗಾಗಲೇ ಪರಿಹಾರಗಳನ್ನು ತನ್ನ ಲೇಟೆಸ್ಟ್ ಸಾಫ್ಟ್‍ವೇರ್ ಅಪ್‍ಡೇಟ್‍ನಲ್ಲಿ ಒದಗಿಸಿದ್ದು ಗೂಗಲ್ ಕ್ರೋಮ್ ಬಳಕೆದಾರರು ಲೇಟೆಸ್ಟ್ ಆವೃತ್ತಿಗೆ ಅಪ್‍ಗ್ರೇಡ್ ಮಾಡುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.
ಗೂಗಲ್ ಪ್ರಕಾರ ಲೇಟೆಸ್ಟ್ ಕ್ರೋಮ್ ಬ್ರೌಸರ್ ಗೆ ಸುಮಾರು 22 ಭದ್ರತೆಗೆ ಸಂಬಂಧಿಸಿದ ಪರಿಹಾರಗಳನ್ನು ಒದಗಿಸಲಾಗಿದೆ ಹಾಗೂ ಇದು ಬಳಕೆದಾರರ ಗೌಪ್ಯತೆಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ.
ಗೂಗಲ್ ತನ್ನ ಕ್ರೋಮ್ ಸ್ಟೇಬಲ್ ಚಾನೆಲ್ ಅನ್ನು ವಿಂಡೋಸ್, ಮ್ಯಾಕ್ ಮತ್ತು ಲೀನಕ್ಸ್‍ಗೆ 96.0.4664.93ಗೆ ಅಪ್‍ಡೇಟ್ ಮಾಡಿದ್ದು ಇದು ಎಲ್ಲಾ ಬಳಕೆದಾರರಿಗೆ ಲಭ್ಯವಿದೆ.
ಕ್ರೋಮ್‍ನಲ್ಲಿ ಲಭ್ಯ ಅಪ್‍ಡೇಟ್‍ಗಳಿಗಾಗಿ ಪರಿಶೀಲಿಸಲು ಬಳಕೆದಾರರು ಪುಟದ ಬಲ ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳಿಗೆ ಕ್ಲಿಕ್ ಮಾಡಿ ಅಬೌಟ್ ಕ್ರೋಮ್ ಆಪ್ಶನ್ ಕ್ಲಿಕ್ ಮಾಡಿದಾಗ ಅಪ್‍ಡೇಟ್ ಆಗುತ್ತದೆ.