ಕಾಸರಗೋಡು: ಏಡ್ಸ್ ನಿಯಂತ್ರಣ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಶಾಸಕ ಎನ್.ಎ ನೆಲ್ಲಿಕುನ್ನು ಬುಧವರ ಕಾಸರಗೋಡು ನಗರಸಭಾಂಗಣದಲ್ಲಿ ನೆರವೇರಿಸಿದರು. ಕೇರಳ ರಾಜ್ಯ ಏಡ್ಸ್ ಕಂಟ್ರೋಲ್ ಸೊಸೈಟಿ, ಜಿಲ್ಲಾ ಮೆಡಿಕಲ್ ಆಫೀಸ್, ರಾಷ್ಟ್ರೀಯ ಆರೋಗ್ಯ ದೌತ್ಯ, ವಿವಿಧ ಸ್ವಯಂ ಸೇವಾ ಸಂಘಟನೆ ಸಹಕಾರದೊಂದಿಗೆ ಕಾರ್ಯಕ್ರ ಆಯೋಜಿಸಲಾಗಿತ್ತು.ನಗರಸಭಾ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಜಿಲ್ಲಾ ಸಹಾಯಕ ವೈದ್ಯಾಧಿಕಾರಿ ಡಾ. ಮನೋಜ್ ಎ.ಟಿ ವಿಶ್ವ ಏಡ್ಸ್ ನಿಯಂತ್ರಣ ದಿನದ ಸಂದೇಶ ನೀಡಿ, ಪ್ರತಿಜ್ಞೆ ಬೋಧಿಸಿದರು. ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್, ನಗರಸಭಾ ಸದಸ್ಯೆ ರಂಜಿತಾ, ಜಿಲ್ಲಾ ಸಾಮಾಜಿಕನೀತಿ ಅಧಿಕಾರಿ ಶೀಬಾ ಮುಮ್ತಾಸ್, ಡಾ. ನಾರಾಯಣ ನಾಯ್ಕ್, ಡಾ. ಕೃಷ್ಣ ನಾಯ್ಕ್, ಅಬ್ದುಲ್ ಲತೀಫ್ ಮಠತ್ತಿಲ್ ಉಪಸ್ಥಿತರಿದ್ದರು. ಜಿಲ್ಲಾ ಏಡ್ಸ್ ಸೆಲ್ ನಿಯಂತ್ರಣಾಧಿಕಾರಿ ಡಾ.ಟಿ.ಪಿ.ಆಮಿನಾ ಸ್ವಾಗತಿಸಿದರು. ನಯನ ಎಸ್. ವಂದಿಸಿದರು. ಈ ಸಂದರ್ಭ ಏಡ್ಸ್ ಜನಜಗೃತಿ ತರಗತಿ, ಪ್ರಶ್ನೋತ್ತರ ನಡೆಯಿತು.