ಕಾಸರಗೋಡು: ರಾಜ್ಯದ ಅಗತ್ಯಗಳಿಗೆ ಆಕ್ಷೇಪಣೆಗಳು ಎದುರಾದರೆ ಸರ್ಕಾರ ವಿರೋಧ ಪಕ್ಷಗಳ ಮಾತನ್ನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು.
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕೆ-ರೈಲು ಅನುಷ್ಠಾನದ ಪ್ರತಿಭಟನಾ ತೊಡಕಿನ ಬಗ್ಗೆ ಉಲ್ಲೇಖಿಇಸದ ಅವರು ಸ್ವಾಭಾವಿಕವಾಗಿ ಪುನರ್ವಸತಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು.ಯಾರಿಗೂ ತೊಂದರೆಯಾಗದು.ಜಮೀನು ಸ್ವಾಧೀನಪಡಿಸಿಕೊಂಡಾಗ ಸಹಜವಾಗಿಯೇ ಸಮಸ್ಯೆಗಳು ಉದ್ಭವಿಸುತ್ತವೆ ಎಂದರು.
ನೀಲೇಶ್ವರಂ ಪಾಲಾಯಿ ರೆಗ್ಯುಲೇಟರ್ ಕಮ್ ಸೇತುವೆಯನ್ನು ನಿನ್ನೆ ಉದ್ಘಾಟಿಸಿ ಅವರು ಮಾತನಾಡಿದರು.
ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳು ಮಾತನಾಡಿ ಪ್ರತಿಪಕ್ಷ ವಿರೋಧಿಸುತ್ತಿದೆ ಎಂದು ಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು. ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಬೇಡಿ. ಮುಂದಿನ ಪೀಳಿಗೆÉ ಶಾಪ ಹಾಕಬಾರದು ಎಂದು ಹೇಳಿದ್ದರು. ಇದೇ ವೇಳೆ ಪ್ರತಿಭಟನೆಯನ್ನು ನಿರ್ಲಕ್ಷಿಸಿ ಮುಖ್ಯಮಂತ್ರಿ ಮತ್ತೆ ಹೇಳಿಕೆ ನೀಡಿದ್ದಾರೆ.
ಸಿಲ್ವರ್ ಲೈನ್ ವಿಚಾರವಾಗಿ ಎಡರಂಗದೊಳಗಿನ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದು, ಸರ್ಕಾರ ಪರಿಹಾರ ಅಭಿಯಾನಕ್ಕೆ ಮುಂದಾಗಿದೆ. ಪ್ರತಿಭಟನಾಕಾರರ ಮನಸ್ಸುಗೆಲ್ಲಲು ಸರ್ಕಾರ ಮುಂದಾಗಿದೆ. ಭೂಮಿ ಬಿಟ್ಟುಕೊಡುವವರಿಗೆ ಉತ್ತಮ ಪರಿಹಾರ ನೀಡಲಾಗುವುದು ಎಂಬ ಪ್ರಚಾರ ನಡೆಯುತ್ತಿದೆ.