ಕಾಸರಗೋಡು: ತಲಕ್ಲಾಯಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠೀ ಮಹೋತ್ಸವ ಡಿ. 9ರಂದು ಜರುಗಲಿದೆ. ದೇವಸ್ಥಾನದ ತಂತ್ರಿ ಅರವತ್ ದಾಮೋದರನ್ ತಂತ್ರಿ ನೇತೃತ್ವ ವಹಿಸುವರು. ಬೆಳಗ್ಗೆ ಶ್ರೀ ದೇವರಿಗೆ ವಿವಿಧ ಅಭಿಷೇಕ, ಕಲಶಾಭಿಷೇಕ, ಶ್ರೀದೇವರ ಬಲಿ ಉತ್ಸವ, ಸಾಯಂಕಾಲ ದೀಪಾರಾಧನೆ, ಕೇರಳ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ವಿಜೇತ ಮಡಿಕೈ ಉಣ್ಣೀಕೃಷ್ಣನ್ ಮಾರಾರ್ ಮತ್ತು ಬಳಗದವರಿಂದ ತಾಯಂಬಕ, ಅತ್ತಾಳಪೂಜೆ, ಹಾಗೂ ಶ್ರೀ ದೇವರ ತಿಡಂಬು ನೃತ್ಯದೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ. ಕೋವಿಡ್ ಮಾನದಂಡದೊಂದಿಗೆ ಕಾರ್ಯಕ್ರಮಗಳು ಜರುಗಲಿರುವುದಾಗಿ ಪ್ರಕಟಣೆ ತಿಳಿಸಿದೆ.