ಮುಂಬೈ: ಬ್ಯಾಂಕ್ ಖಾತೆಗೆ ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ಮಾಹಿತಿಗಳನ್ನು ಅಪ್‌ಡೇಟ್ ಮಾಡಲು ಗ್ರಾಹಕರಿಗೆ ನೀಡಿದ್ದ ಗಡುವನ್ನು 2022ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗುರುವಾರ ತಿಳಿಸಿದೆ.

ಕೆವೈಸಿ ಅಪ್‌ಡೇಟ್ ಮಾಡದೇ ಇರುವ ಗ್ರಾಹಕರ ವಿರುದ್ಧ ಮಾರ್ಚ್ 31ರವರೆಗೆ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಂತೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸಲಹೆ ನೀಡಿದೆ. ಓಮೈಕ್ರಾನ್ ಸೃಷ್ಟಿಸಿರುವ ಅನಿಶ್ಚಿತ ವಾತಾವರಣದಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಅದು ಹೇಳಿದೆ.
ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ಕಾರಣಕ್ಕಾಗಿ ಆರ್‌ಬಿಐ ಈ ಹಿಂದೆ ಮೇ ತಿಂಗಳಿನಲ್ಲಿ ಕೆವೈಸಿ ಅಪ್‌ಡೇಟ್ ಮಾಡುವ ಗಡುವನ್ನು 2021ರ ಡಿಸೆಂಬರ್ ತಿಂಗಳವರೆಗೂ ವಿಸ್ತರಣೆ ಮಾಡಿತ್ತು.