ಪೆರ್ಲ: 'ನಮ್ಮ ಹಕ್ಕು ನಾವು ಸಂರಕ್ಷಿಸುವೆವು' ದಲಿತ ಹಕ್ಕು ತಿಳುವಳಿಕಾ ಸಂಗಮ ಸ್ವರ್ಗ ಜಂಕ್ಷನ್ ನಲ್ಲಿ ಭಾನುವಾರ ಜರಗಿತು.
ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯ ರಾಧಾಕೃಷ್ಣ ಉಳಿಯತ್ತಡ್ಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ದೀಪ ಬೆಳಗಿಸಿ, ತಿಳುವಳಿಕಾ ಸಂಗಮ ಉದ್ಘಾಟಿಸಿ ಮಾತನಾಡಿ, 'ದಲಿತ ಸಂಸ್ಕøತಿ' ಅಥವಾ 'ದಲಿತತ್ವ' ಇಲ್ಲಿನ ಸಂಸ್ಕೃತಿಗೆ ಪೂರಕವಾಗಿದೆ. ಇಲ್ಲಿನ ಮೂಲ ನಿವಾಸಿಗಳಾದ ಮೊಗೇರರು ಇಲ್ಲಿನ ಮಣ್ಣಿನೊಂದಿಗೆ ಸೆಣಸಾಡಿ, ದುಡಿದು ದೇಶವನ್ನು ಸಂಪನ್ನಗೊಳಿಸಿದ್ದಾರೆ.ಮೊಗೇರ ಅರಸರು ಇಲ್ಲಿ ಆಡಳಿತ ನಡೆಸಿದ್ದಾರೆ.ಆದರೆ ಪರಂಪರಾಗತವಾಗಿ ಇಲ್ಲಿನ ಆಡಳಿತ ಶಾಹಿ ಅಥವಾ ಜಾತೀಯ ವ್ಯವಸ್ಥೆ ಮೊಗೇರ ಸಮುದಾಯವನ್ನು ಹೀನಾಯವಾಗಿ, ತಿರಸ್ಕಾರ ಮನೋಭಾವನೆಯಿಂದ ನೋಡುತ್ತಾ ಬಂದಿದೆ.ಜಾತೀಯ ವ್ಯವಸ್ಥೆಯಿಂದ ಸಾಂಸ್ಕೃತಿಕ ವಿಕೇಂದ್ರೀಕರಣ ನಡೆಯುತ್ತಿದೆ.ನಮ್ಮ ಹಕ್ಕುಗಳನ್ನು ಸಂರಕ್ಷಿಸಲು ನಾವು ಬದ್ಧರಾಗಿರಬೇಕು.ಮಹಾನ್ ಮಾನತಾವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದಮನಿತರ ಧ್ವನಿಯಾಗಿದ್ದರು.ಅವರು ನಮ್ಮ ದೇಶದ ಕಾನೂನು ರೂಪಿಸಿದ್ದಾರೆ.ಕೇಂದ್ರ ಸರಕಾರ ನಮಗೆ ಮೀಸಲಾತಿ, ಹಾಗೂ ಅನೇಕ ಸವಲತ್ತುಗಳನ್ನು ನೀಡುತ್ತಾ ಬಂದಿದೆ. ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಉನ್ನತ ಶಿಕ್ಷಣ ಪಡೆಯುವುದು ಅತೀ ಮುಖ್ಯ.ಸಂವಿಧಾನಾತ್ಮಕವಾಗಿ ನಮಗೆ ಲಭಿಸಿದ ಮೀಸಲಾತಿಯನ್ನು ಪಡೆಯಲು ನಾವು ಶ್ರಮಿಸಬೇಕು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬೇಕು.ಈ ಬಗ್ಗೆ ತಿಳುವಳಿಕೆ ಮೂಡಿಸಲು, ಚಿಂತನೆ ಹಾಗೂ ಆಚಾರ ವಿಚಾರಗಳ ವಿನಿಮಯ ನಡೆಸಲು ವೇದಿಕೆ ಸೃಷ್ಟಿಯಾಗಬೇಕು.ಸಮಾಜದಲ್ಲಿ ಎಲ್ಲರಿಗೂ ಬದುಕುವ, ಮಾತನಾಡುವ, ಹೋರಾಡುವ ಸಮಾನ ಹಕ್ಕಿದೆ.ಮೂಢ ನಂಬಿಕೆಗಳನ್ನು ಬದಿಗೆ ಸರಿಸಿ, ಮೂಲ ನಂಬಿಕೆಗಳಿಗೆ ಪ್ರಾಶಸ್ತ್ಯ ನೀಡುವ ಮೂಲಕ ಇಲ್ಲಿನ ನೆಲ ಮೂಲ ಸಂಸ್ಕೃತಿ ಉಳಿಸಲು ಪ್ರಯತ್ನಿಸಬೇಕು.ಧಾರ್ಮಿಕ ಮೌಲ್ಯ ಹಾಗೂ ಆರಾಧನಾ ಪರಂಪರೆಯನ್ನು ಎತ್ತಿ ಹಿಡಿಯಲು ಐಕ್ಯತೆಯಿಂದ ಹೋರಾಡಬೇಕು.ಮೂಲ ಸಂಸ್ಕೃತಿಗೆ ಚ್ಯುತಿ ಬಾರದಂತೆ ಸಮಾಜವನ್ನು ತಿದ್ದುವ ಸಾಮಥ್ರ್ಯ ನಮ್ಮಲ್ಲಿ ಮೂಡಿ ಬರಬೇಕು.ಹಾಗೂ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಯಬೇಕು ಎಂದರು.
ಸಂಜೀವ ಪೆರಿಯಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಮನಸ್ಸಿನಲ್ಲಿ ಹುದುಗಿರುವ ಕೊಳಕು.ಯಾರನ್ನೂ ಹೀನ ದೃಷ್ಟಿಯಿಂದ ನೋಡುವುದು ಸರಿಯಲ್ಲ.ಎಲ್ಲರಿಗೂ ಮಾನುಷಿಕ ಪರಿಗಣನೆ ನೀಡಬೇಕು.ಹೋರಾಟ ಎಂಬುದು ಮಾತಿಗೆ ಸೀಮಿತವಾಗಿರದೆ, ಧರ್ಮ, ನೀತಿ, ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕುರಾಜಕೀಯದಲ್ಲಿ ಧಾರ್ಮಿಕ, ಕುಶಲ ರಾಜಕೀಯ ಇರಬೇಕೇ ಹೊರತು ಕುಟಿಲ ರಾಜಕೀಯ ಇರಬಾರದು.ರೀತಿ, ರಿವಾಜು ಕ್ರಮ ನೀತಿಗಳನ್ನು ಮೀರಿ ಹೋಗಬಾರದು.ಭಾರತೀಯ ಸಂಸ್ಕೃತಿ, ಧಾರ್ಮಿಕತೆಯಲ್ಲಿ ಎಲ್ಲಾ ಸಮುದಾಯಗಳಿಗೂ ಸಮಾನ ಹಕ್ಕು, ಅವಕಾಶವಿದೆ ಎಂದರು.
ರಂಗ ನಿರ್ದೇಶಕ ಉದಯ ಸಾರಂಗ್, ಎಣ್ಮಕಜೆ ಗ್ರಾ.ಪಂ. ಸದಸ್ಯ ಶಶಿಧರ ಕಾಟುಕುಕ್ಕೆ, ಶಿಕ್ಷಕ, ಸಾಹಿತಿ ಸುಧೀಶ್ ಚಟ್ಟಂಚಾಲ್, ಮಂಜೇಶ್ವರ ಮೊಗೇರ ಸೊಸೈಟಿ ಉಪಾಧ್ಯಕ್ಷೆ ಗಿರಿಜಾ ತಾರಾನಾಥ್, ಮಧೂರು ಮದರು ಮಾತಾ ಸೇವಾ ಸಮಿತಿ ಜಿಲ್ಲಾಧ್ಯಕ್ಷ ವಸಂತ ಅಜಕೋಡು, ಆದಿ ದಲಿತ ಮುನ್ನೋಟ ಸಮಿತಿ ಅಧ್ಯಕ್ಷ ಚಂದ್ರಶೇಖರ ಕುಂಬಳೆ, ಸುಂದರ ಅಪ್ಪಯ್ಯ ಮೂಲೆ, ಪ್ರದೀಪ್ ಮುಂಡಿತಡ್ಕ, ಕೃಷ್ಣಮೋಹನ ಪೆÇಸೋಳ್ಯ ಪ್ರಸ್ತಾವಿಕವಾಗಿ ಮಾತನಾಡಿದರು.