HEALTH TIPS

ಕೋವಿಡ್ ಲಾಕ್ ಡೌನ್ ನಂತರ ಎನ್ ಜಿಒ, ಸಮಾಜ ಸೇವಾ ಸಂಘಟನೆಗಳು ತೀವ್ರ ಸಂಕಷ್ಟದಲ್ಲಿ: ಅಧ್ಯಯನದಿಂದ ಬಹಿರಂಗ

Top Post Ad

Click to join Samarasasudhi Official Whatsapp Group

Qries

             ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ನಂತರ ಸರ್ಕಾರೇತರ ಸಂಘಟನೆಗಳು ಮತ್ತು ಇತರ ಸಾಮಾಜಿಕ ವಲಯ ಸಂಸ್ಥೆಗಳು ತೀವ್ರ ಸಂಕಷ್ಟದಲ್ಲಿವೆ ಎಂದು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ. ನಮ್ಮ ಸಂಸ್ಥೆಯಲ್ಲಿರುವವರ ಆರೋಗ್ಯ ಸ್ಥಿತಿಗತಿ ನೋಡಿಕೊಳ್ಳುವುದು ಅತಿ ಕಠಿಣ ಸವಾಲಾಗಿದೆ ಎಂದು ಪಾರ್ಟ್ನರಿಂಗ್ ಹೋಪ್ ಇಂಟೂ ಆಕ್ಷನ್(ಪಿಹೆಚ್ ಐಎ) ಫೌಂಡೇಶನ್ ನ ನಿರ್ದೇಶಕ ಆನಂದ್ ಬೊಲಿಮೆರಾ ಹೇಳುತ್ತಾರೆ.

              ಭಾರತದಾದ್ಯಂತ ಸರ್ಕಾರೇತರ ಸಮಾಜ ಸೇವಾ ಸಂಸ್ಥೆಗಳು ಕೋವಿಡ್ ಸಾಂಕ್ರಾಮಿಕ ರೋಗದಿಂದ ಸಂಸ್ಥೆಗೆ ಬರುವ ಧನಸಹಾಯಕ್ಕೆ ತೀವ್ರ ಹೊಡೆತ ಬಿದ್ದಿದೆ. ಸಂಸ್ಥೆಯ ಕಾರ್ಯಪಡೆ ಮತ್ತು ಕಾರ್ಯಕ್ರಮಗಳ ಮೇಲೆ ತೀವ್ರ ಪ್ರಭಾವ ಬೀರಿದೆ. ಸಾಮಾಜಿಕ ವಲಯದ ಸಂಸ್ಥೆಗಳು (SSOs) ಎನ್‌ಜಿಒಗಳು ಬಹು ಸವಾಲುಗಳನ್ನು ಎದುರಿಸಿವೆ, ಪರಿಹಾರ ಕಾರ್ಯಗಳನ್ನು ನಿರ್ವಹಿಸುವುದು, ನಿಧಿ ಸಂಗ್ರಹಿಸುವುದು, ಲಾಕ್‌ಡೌನ್ ಸಮಯದಲ್ಲಿ ಮತ್ತು ನಂತರ ಸಿಬ್ಬಂದಿಗೆ ತರಬೇತಿ ನೀಡುವುದು, ನಿರ್ಗತಿಕರನ್ನು ನೋಡಿಕೊಳ್ಳುವುದು ಸಮಸ್ಯೆಯಾಗಿದೆ ಎಂದು ವರದಿ ಹೇಳಿದೆ.

         ಕೋವಿಡ್ ಸಾಂಕ್ರಾಮಿಕ, ಲಾಕ್ ಡೌನ್ ನಿಂದ ನಾವು ಹಣದ ಕೊರತೆಯನ್ನು ಎದುರಿಸಬೇಕಾಗಿತ್ತು, ಈ ಅವಧಿಯಲ್ಲಿ ನಾವು ಕೈಗೊಳ್ಳುತ್ತಿದ್ದ ಕೆಲಸದ ಗುಣಮಟ್ಟವೂ ಕುಸಿದಿದೆ. ಜನರಿಗೆ ಸಹಾಯ ಮಾಡಲು ಹಲವಾರು ಯೋಜನೆಗಳಿದ್ದರೂ, ಕೇವಲ ಶೇಕಡಾ 10ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ ಪ್ರಜಾಯತ್ನ ಸಂಘಟನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇರಿ ಪುನ್ನೂಸ್ ಹೇಳುತ್ತಾರೆ.

       ಸಾಂಕ್ರಾಮಿಕ ರೋಗದಿಂದ ಪೀಡಿತರಿಗೆ, ವಿಶೇಷವಾಗಿ ತಮ್ಮ ಊರುಗಳಿಗೆ ಮರಳಿದ ವಲಸೆ ಕಾರ್ಮಿಕರಿಗೆ ಪರಿಹಾರವನ್ನು ಒದಗಿಸಲು ಕಷ್ಟವಾಗುತ್ತಿದೆ. ಜನರಿಗೆ ಹಣದ ಮತ್ತು ಆಹಾರ ಕೊರತೆ ಉಂಟಾಗಿದೆ. ರೈತರಿಗೆ ಸಹಾಯ ಮಾಡಲು ಹಣ ಬೇಕಾಗಿದೆ ಎಂದು ಆಗಾ ಖಾನ್ ಗ್ರಾಮೀಣ ಬೆಂಬಲ ಕಾರ್ಯಕ್ರಮದ ನಿರ್ದೇಶಕ ನವೀನ್ ಪಾಟೀದಾರ್ ಹೇಳುತ್ತಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries