HEALTH TIPS

ಮಾದಕ ನಡಿಗೆಯಲ್ಲಿ ಫೇಮಸ್ ಆದ ಕಾಗೆ!: ವಿಶ್ವಸುಂದರಿ ಹರ್ನಾಸ್ ಸಂಧು ಮನೆಯ ಕಾಗೆ ಆಗಿರಬಹುದೆಂದ ಸಾಮಾಜಿಕ ಜಾಲತಾಣಗಳು

                                          

                   ಕರಾವಳಿ ರಾಜ್ಯಗಳಲ್ಲಿ  ಕಾಗೆಯನ್ನು ಉಲ್ಲೇಖಿಸುವ ಅನೇಕ ಗಾದೆಗಳು ಮತ್ತು ಉಪಮೆಗಳು ಇವೆ. ಅವುಗಳಲ್ಲಿ ಕಾಗೆಯನ್ನು ಸ್ವಲ್ಪ ಹಗುರವಾಗಿಸುವಂತಹವುಗಳೇ ಹೆಚ್ಚು. ಪ್ರೀತಿಸುವ ಹುಡುಗಿ ಕಾಗೆಯಂತೆ ಕಂಡರೂ ಐಶ್ವರ್ಯ ರೈ ಯಂತೆ ಕಾಣಿಸುವಿ ಎಂಬ ‘ತಮಾಷೆ’, ಕಾಗೆ ಸ್ನಾನ ಮಾಡಿದರೆ ಕೋಗಿಲೆಯಾಗುವುದೇ ಎಂಬ ಗಾದೆ ಮಾತುಗಳೇ ಮೊದಲಾದ ಹಲವುಗಳಿವೆ. ಇಂತಹ ಜೋಕುಗಳನ್ನು ಹೇಳುವವರಿಗೆ ಹಿನ್ನಡೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ಕಾಗೆ’ಯೊಂದು ವೈರಲ್ ಆಗುತ್ತಿದೆ.

                       ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು ಪೋಸ್ಟ್ ಮಾಡಿದ ಕಾಗೆಯ ವಿಡಿಯೋ ಜನಪ್ರಿಯವಾಗುತ್ತಿದೆ. ಕೇವಲ ಹತ್ತೇ ಸೆಕೆಂಡ್ ಗಳ ದೃಶ್ಯಾವಳಿ ಹರಡಲು ಆರಂಭಿಸುತ್ತಿದ್ದಂತೆ ಕಾಗೆ ಸಾವಿರಾರು ಅಭಿಮಾನಿಗಳನ್ನು ಗಳಿಸುತ್ತಿದೆ. ಏಕೆಂದರೆ ವೀಡಿಯೋದಲ್ಲಿ ಕಾಗೆಯ ನೋಟವು ರ್ಯಾಂಪ್ ಮೇಲೆ ಸ್ಪರ್ಧಿಸುವ ರೂಪದರ್ಶಿಯ ‘ಆಟಿಟ್ಯೂಡ್’ ಅನ್ನು ಮೀರಿದ ಪ್ರದರ್ಶನವಾಗಿದೆ.


                 ಒಂದು ಗೋಡೆಯ ಮೇಲೂ ಕಾಗೆ ನಡೆಯುತ್ತದೆ ಎಂಬುದಷ್ಟೇ ದೃಶ್ಯದಲ್ಲಿ ಹೇಳಲ್ಪಟ್ಟಿದ್ದರೂ ಆ ನಡಿಗೆಯಲ್ಲಿ ಮನೋಹರಿತೆ ಥಳುಕು ಹೆಚ್ಚು ವೀಕ್ಷಕರ ಗಮನ ಸೆಳೆಯಲು ಕಾರಣವಾಯಿತು. ಎಂತಹ ಬೆರಗುಗೊಳಿಸುವ ಸೌಂದರ್ಯವತಿಯೂ ಒಂದು ಹಂತದಲ್ಲಿ ಬೆಕ್ಕಸ ಬೆರಗಾಗುವ ದೃಶ್ಯವದು. ಯಾವೊಂದು ತರಬೇತಿಯೂ ಇಲ್ಲದೆ ಸ್ವಾಭಾವಿಕವಾದ ನಡಿಗೆಯಲ್ಲಿ ಇಷ್ಟೊಂದು ಆಟ್ಯುಟ|ಉಡ್ ತಂದಿರುವುದು ಹೇಗೆಂದು ಪೋಸ್ಟ್ ಪ್ರಶ್ನಿಸುತ್ತದೆ. ವೀಡಿಯೋದ ಕೆಳಗಿನ ಕಮೆಂಟ್ ಕೂಡಾ ಇದೇ ಪ್ರಶ್ನೆ ಮುಂದಿರಿಸಿದೆ. 

I am limited edition with an attitude pic.twitter.com/KIReTSEJtt

— Susanta Nanda IFS (@susantananda3) March 23, 2021

                 ವೀಡಿಯೊದ ಕೆಳಗೆ, "ವಿಶ್ವಸುಂದರಿ ಹರ್ನಾಸ್ ಸಂಧು ಅವರ ಮನೆಗೆ ಕಾಗೆ ನಿಯಮಿತವಾಗಿ ಭೇಟಿ ನೀಡಿರಬೇಕು",   "ಎಲ್ಲಾ ಮಾಡೆಲ್‍ಗಳು ಎಲ್ಲಿದ್ದಾರೆ, ಈ ಮುಂತಾದ  ಕಾಮೆಂಟ್‍ಗಳು ಕಾಣಿಸಿಕೊಂಡವು. ಇದೇ ವೇಳೆ ಮೊದಲು ವಿಡಿಯೋ ಪೋಸ್ಟ್ ಮಾಡಿದ ಸುಶಾಂತ್ ನಂದ ಕೊಟ್ಟ ಶೀರ್ಷಿಕೆಯೇ ಬೇರೆ. ಸುಶಾಂತ್ ನಂದಾ ಅವರು 'ಐ ಆಮ್ ಎ ಲಿಮಿಟೆಡ್ ಎಡಿಷನ್ ವಿತ್ ಆಟಿಟ್ಯೂಡ್' ಎಂದು ಶೀರ್ಷಿಕೆ ನೀಡಿರುವರು. ಅದೇನೇ ಇರಲಿ, ಕಾಗೆ ಮತ್ತು ಕಾಗೆಯ ನಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ ಆಗುತ್ತಿದೆ. 

Tweet

Conversation

This Tweet is from an account that no longer exists. Learn more
Show replies
Show more replies

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries