ಕಾಸರಗೋಡು: ಚಂಪಾ ಷಷ್ಠೀ ಮಹೋತ್ಸವ ಅಂಗವಾಗಿ ಡಿ. 9ರಂದು ಜಿಲ್ಲೆಯ ನಾನಾ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಕ್ರಮ ಜರುಗಲಿದೆ. ಮಂಜೇಶ್ವರದ ಶ್ರೀ ಮತ್ ಅನಂತೇಶ್ವರ ದೇವಸ್ಥಾನ, ವರ್ಕಾಡಿಯ ಕಾವಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮುಳಿಯಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ, ಪುತ್ತಿಗೆ ಶ್ರೀ ಕುಮಾರಸುಬ್ರಹ್ಮಣ್ಯ ದೇವಸ್ಥಾನ, ಬೇಳ ಶ್ರೀ ಕುಮಾರಮಂಗಲ ದೇವಸ್ಥಾನ, ಕಾಸರಗೋಡು ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಷಚಷ್ಠೀ ಮಹೋತ್ಸವ ನಡೆಯಲಿದೆ. ಕೋವಿಡ್ ಮಾನದಂಡದೊಂದಿಗೆ ವಿವಿಧ ದೇವಾಲಯಗಳಲ್ಲಿ ಉತ್ಸವ ಆಚರಿಸಲಾಗುತ್ತಿದೆ.