HEALTH TIPS

ಓಮಿಕ್ರಾನ್ ಸೋಂಕು ತಡೆಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ; ವಿವರ ಹೀಗಿದೆ

                 ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬಂದಿದ್ದವರ ಪೈಕಿ ಇಬ್ಬರಿಗೆ ಓಮಿಕ್ರಾನ್ ಕೊರೋನಾ ರೂಪಾಂತರಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಕರ್ನಾಟಕ ರಾಜ್ಯ ಸರ್ಕಾರ ಡಿಸೆಂಬರ್ 03 ರಂದು ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. 


               

  • ವಿದೇಶದಿಂದ ಬರುವವರಿಗೆ ವಿಮಾನ ನಿಲ್ದಾಣದಲ್ಲಿ ಆರ್‍ಟಿಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ. ಪಾಸಿಟಿವ್ ಕಂಡು ಬಂದರೆ ವಿಮಾನ ನಿಲ್ದಾಣದ ಸುತ್ತಮುತ್ತಲು ತಂಗಲು ವ್ಯವಸ್ಥೆ ಮಾಡಲಾಗುವುದು
  • ಎರಡು ಡೋಸ್ ವ್ಯಾಕ್ಸಿನೇಷನ್ ಆಗಿದ್ದರೆ ಮಾತ್ರ ಮಾಲ್, ಥಿಯೇಟರ್‍ಗಳಿಗೆ ಎಂಟ್ರಿ
  • ಶಾಲಾ ಕಾಲೇಜು ವಿದ್ಯಾರ್ಥಿಗಳ ಪೋಷಕರಿಗೆ ವ್ಯಾಕ್ಸಿನೇಷನ್ ಕಡ್ಡಾಯವಾಗಿರುತ್ತದೆ. 
  • ಕೇರಳ, ಮಹಾರಾಷ್ಟ್ರದಿಂದ ಬರುವವರೆಗೆ ಆರ್‍ಟಿಪಿಸಿಆರ್ ವರದಿ ಕಡ್ಡಾಯವಾಗಿದೆ.
  • ಮದುವೆಯಲ್ಲಿ 500 ಮಂದಿಗೆ ಮಾತ್ರ ಅವಕಾಶ.
  • ಪ್ರತಿದಿನ 1 ಲಕ್ಷ ಕೋವಿಡ್ ಟೆಸ್ಟ್ ನಡೆಸಲು ಸೂಚನೆ.
  • ಶಾಲಾ ಕಾಲೇಜುಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸಬಾರದು.
  • ಆರೋಗ್ಯ ಇಲಾಖೆಗೆ ಆಕ್ಸಿಜನ್ ಬೆಡ್ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಮಾಡಿಕೊಳ್ಳಲು ಸೂಚಿಸಲಾಗಿದೆ. 
  • ಈಗಾಗಲೇ ಆರ್‍ಟಿಪಿಸಿಆರ್ ನೆಗೆಟಿವ್ ವರದಿಯನ್ನು ಪಡೆದಿರುವ, ಹಾಸ್ಟೆಲ್‍ಗಳಲ್ಲಿ ಉಳಿದುಕೊಂಡಿರುವ ಕೇರಳದ ವಿದ್ಯಾರ್ಥಿಗಳು, ಮೊದಲ ವರದಿಯ ನಂತರ 7ನೇ ದಿನದಂದು ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ.
  • ಮಹಾರಾಷ್ಟ್ರ ಮತ್ತು ಕೇರಳ ಗಡಿಭಾಗದ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು.
  • ಸರ್ಕಾರಿ ಕಚೇರಿಗಳು, ಮಾಲ್‍ಗಳು, ಹೋಟೆಲ್‍ಗಳು, ಈಜುಕೊಳಗಳು ಮತ್ತು ಥಿಯೇಟರ್‍ಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಲೇಬೇಕು.
  • ಎಲ್ಲಾ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಪರೀಕ್ಷೆ ಮಾಡಲು ಕಾರ್ಯನಿರತರಾಗಬೇಕು.
  • 13. ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆ ನಿಮಿತ್ತ ಯಾವುದೇ ಸಾರ್ವಜನಿಕ ಸಭೆಗೆ ಅವಕಾಶವಿಲ್ಲ.

                  ಇದೇ ವೇಳೆ ನಾಪತ್ತೆಯಾಗಿರುವ ದಕ್ಷಿಣ ಆಫ್ರಿಕಾದಿಂದ ಬಂದವರ ಪೈಕಿ 10 ಮಂದಿ ನಾಪತ್ತೆಯಾಗಿರುವುದರ ಬಗ್ಗೆಯೂ ಸಚಿವ ಆರ್ ಅಶೋಕ್ ಮಾತನಾಡಿದ್ದು, ರಾತ್ರಿಯೊಳಗೆ ಪತ್ತೆ ಮಾಡುತ್ತೇವೆ ಎಂದಷ್ಟೇ ಹೇಳಿದ್ದಾರೆ. ಇನ್ನು ಕೋವಿಡ್-19 ಹೊಸ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರತಿನಿತ್ಯ 1 ಲಕ್ಷ ಕೋವಿಡ್-19 ಟೆಸ್ಟ್ ಮಾಡಲು ಸರ್ಕಾರ ಆದೇಶ ನೀಡಿದೆ.

                   ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಲು ತೀರ್ಮಾನ

      ಓಮಿಕ್ರಾನ್ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ‌ ವ್ಯಾಕ್ಸಿನೇಷನ್ ಹೆಚ್ಚಿಸಿ ಪ್ರತಿದಿನ ಒಂದು ಲಕ್ಷ ಸೋಂಕು ಪರೀಕ್ಷಿಸಲು ಸೇರಿದಂತೆ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ.

         ಆರೋಗ್ಯ ತಜ್ಞರು ಅಧಿಕಾರಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಬೆಳಗಾವಿ ಅಧಿವೇಶನಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಬೀಳಲಿದೆ.

              ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ತಜ್ಞರ ಜೊತೆ ಸುದೀರ್ಘ ಸಭೆ ಮಾಡಲಾಗಿದೆ ರಾಜ್ಯದಲ್ಲಿ 2 ಪ್ರಕರಣ ಪತ್ತೆಯಾಗುದೆ. ವಿಶ್ವದಲ್ಲಿ 400 ಪ್ರಕರಣ ಪತ್ತೆಯಾಗಿದೆ. ಈ ರೋಗದಿಂದ ಇದೂವರೆಗೂ‌ ಯಾವುದೇ ಸಾವಿನ ವರದಿ ಇಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೆಚ್ಚಿನ ಮಾಹಿತಿ ನೀಡುವಂತೆ ಸರ್ಕಾರ ಮನವಿ ಮಾಡಲಾಗುವುದು ಎಂದರು.

             ಆಕ್ಷಿಜನ್ ನೆಟ್ ವರ್ಕ್, ಸಮಿತಿ ಮತ್ತೆ ಶುರು ಮಾಡಲಾಗುವುದು. ರಾಜ್ಯದಲ್ಲಿ ಕಂಟ್ರೋಲ್ ರೂಂ ಮತ್ತೆ ಆರಂಭಿಸಲು ಸೂಚನೆ ನೀಡುತ್ತಿದ್ದು, ಕಳೆದ ಬಾರಿ ಉಂಟಾದಂತೆ ಈ ಬಾರಿ ಔಷಧಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಶಾಂಗ್ರಿಲ್ ಹೋಟೆಲ್ ನಲ್ಲಿ ಸಭೆ ಮಾಡಿ ಹೋದವರಿಗೆ ಪಾಸಿಟಿವ್ ಬಂದಿರುವ ಬಗ್ಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ತನಿಖೆಗೆ ಮೀನಾ ನಾಗರಾಜ್ ಅವರನ್ನು ಉಸ್ತುವಾರಿ ಅಧಿಕಾರಿಯಾಗಿ ನೇಮಕ ಮಾಡಲು ತೀರ್ಮಾನ ಮಾಡಲಾಗಿದೆ.

              ಫ್ಲೈಟ್ ಬೋರ್ಡಿಂಗ್ ಆದ ತಕ್ಷಣ ಎಲ್ಲ ಮಾಹಿತಿ ಲಭ್ಯವಾಗುವಂತೆ ಹಾಗೂ ನಿಗದಿಯಾದಂತೆ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸುವ ಬಗ್ಗೆ ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.


    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries