ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹಿಂದೂ ಧರ್ಮದಿಂದ ಮತಾಂತರಗೊಂಡಿರುವ ಮಂದಿಯನ್ನು ಮರಳಿ ಕರೆ ತರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಪರಧರ್ಮದಿಂದ ಹಾನಿ. ಸ್ವಧರ್ಮವನ್ನು ರಕ್ಷಣೆ ಮಾಡಲು ಅದುವೇ ಅತ್ಯುತ್ತಮ ಮಾರ್ಗ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಹಿಂದೂ ಧರ್ಮವನ್ನು ತೊರೆದವರನ್ನು ಮರಳಿ ಕರೆತರಲು ಘರ್ ವಾಪ್ಸಿ ಮಂತ್ರವನ್ನು ಕಾರ್ಯಕರ್ತರು ಜಪಿಸಬೇಕು, ಸ್ವಾರ್ಥ ಅಹಂ ಎಲ್ಲವನ್ನೂ ಬಿಟ್ಟು ಈ ಕಾರ್ಯದಲ್ಲಿ ಕೈಜೋಡಿಸಬೇಕಿದೆ ಎಂದು ಅವರು ಹೇಳಿದರು.