ಉಪ್ಪಿಟ್ಟಿನ ರುಚಿ ಹೇಗಿರುತ್ತೆ ಎನ್ನುವುದು ಅದಕ್ಕೆ ಬಳಸುವ ಸಾಮಗ್ರಿಗಳನ್ನು ಅವಲಂಬಿಸಿರುತ್ತೆ. ಬರೀ ರವೆ ಹಾಕಿ ಮಾಡಿದರೆ ಆ ಉಪ್ಪಿಟ್ಟು ಅಷ್ಟೇನು ರುಚಿಯಾಗಿರಲ್ಲ, ಅದಕ್ಕೆ ತರಕಾರಿ ಸೇರಿಸಿದರೆ ರುಚಿ ಹೆಚ್ಚುತ್ತೆ, ಅದರಲ್ಲೂ ಬಟಾಣಿ, ಅವರೆಕಾಳು ಹಾಕಿ ಮಾಡಿದರೆ ತುಂಬಾನೇ ರುಚಿಯಾಗಿರುತ್ತೆ, ಸಾಮಾನ್ಯವಾಗಿ ಉಪ್ಪಿಟ್ಟು ಬೇಡ ಎಂದು ಹೇಳುವವರಿಗೂ ಈ ಉಪ್ಪಿಟ್ಟು ಅಂದ್ರೆ ಇಷ್ಟವಾಗುವುದು.
ನಾವಿಲ್ಲಿ ಬಟಾಣಿ ಹಾಕಿ ಮಾಡಿರುವ ಉಪ್ಪಿಟ್ಟು ರೆಸಿಪಿ ನೀಡಿದ್ದೇವೆ, ಈ ಉಪ್ಪಿಟ್ಟು ನಿಮಗೆ ಖಂಡಿತ ಇಷ್ಟವಾಗುವುದು ನೋಡಿ:ಬೇಕಾಗುವ ಸಾಮಗ್ರಿ * 1 ಕಪ್ ಸೂಜಿ ರವೆ ( ಬಾಂಬೆ ರವೆ) * 1 ಕಪ್ ಬಟಾಣಿ *1 ಟೊಮೆಟೊ * 1ಈರುಳ್ಳಿ * 3 ಹಸಿ ಮೆಣಸು * 1 ಆಲೂಗಡ್ಡೆ (ತೆಳುವಾಗಿ ಕತ್ತರಿಸಿ) * 1 ಚಮಚ ಎಣ್ಣೆ/ತುಪ್ಪ * ಕರಿಬೇವು * 1 ಚಮಚ ಉದ್ದು * 1/4 ಚಮಚ ಅರಿಶಿಣ ಹುಡಿ * ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ * ರವೆಯನ್ನು ಹುರಿದು ಇಟ್ಟುಕೊಳ್ಳಿ. * ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಉದ್ದಿನ ಬೇಳೆ ಹಾಕಿ (ಬೇಕಿದ್ದರೆ ನೆಲಗಡಲೆಯನ್ನು ಸೇರಿಸಬಹುದು). * ಈಗ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ. * ಈಗ ಬಟಾಣಿ, ಆಲೂಗಡ್ಡೆ ಹಾಕಿ 2 ನಿಮಿಷ ಫ್ರೈ ಮಾಡಿ. * ನಂತರ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ. * ನಂತರ 4 ಕಪ್ ನೀರು ಹಾಕಿ ತರಕಾರಿ ಬೇಯಿಸಿ. * ತರಕಾರಿ ಬೆಂದ ಮೇಲೆ ರವೆಯನ್ನು ನಿಧಾನಕ್ಕೆ ಉದುರಿಸಿ, ಹೀಗೆ ಉದುರಿಸುವಾಗ ಗಂಟು ಕಟ್ಟಲು ಬಿಡಬೇಡಿ, * ತಿರುಗುಸುತ್ತಲೇ ಇರಿ. * ಉಪ್ಪಿಟ್ಟು ಬೆಂದು ಗಟ್ಟಿಯಾಗಿವಾಗ ಉರಿ ಆಫ್ ಮಾಡಿ. ಹೀಗೆ ಮಾಡಿದರೆ ಉಪ್ಪಿಟ್ಟು ರುಚಿಯಾಗಿರುತ್ತೆ.
NUTRITIONAL INFORMATION ಕ್ಯಾಲೋರಿ - 200ಕ್ಯಾ ಪ್ರೊಟೀನ್ - 6ಗ್ರಾಂ ಕಾರ್ಬ್ಸ್ - 30ಗ್ರಾಂ ನಾರಿನಂಶ - 3ಗ್ರಾಂ