ಬದಿಯಡ್ಕ: ಇತ್ತೀಚೆಗೆ ಕೇರಳ ರಾಜ್ಯದಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾದ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ವಕೀಲ ರಂಜಿತ್ ಶ್ರೀನಿವಾಸನ್ ಅವರ ಸಂಸ್ಮರಣಾ ಕಾರ್ಯಕ್ರಮ ಬಿಜೆಪಿ ಬದಿಯಡ್ಕ ಮಂಡಲ ಕಚೇರಿಯಲ್ಲಿ ಜರಗಿತು.
ಜಿಲ್ಲಾ ಉಪಾಧ್ಯಕ್ಷ ಎಂ.ಸುಧಾಮ ಗೋಸಾಡ ಸಂಸ್ಮರಣಾ ಭಾಷಣ ಮಾಡಿದರು. ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಮಧುಸೂದನ್ ಕೆಮ್ಮಂಗಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಪ್ರಧಾನ ಕಾರ್ಯದರ್ಶಿ ಪಿ. ಆರ್ ಸುನೀಲ್, ಗೋಪಾಲಕೃಷ್ಣನ್, ಮಂಡಲ ಕೋಶಾಧಿಕಾರಿ ಮಹೇಶ್ ವಳಕ್ಕುಂಜ, ಅಲ್ಪಸಂಖ್ಯಾತ ಮೋರ್ಚಾ ಮಂಡಲ ಅಧ್ಯಕ್ಷ ರೋಮನ್ ಡಿಸೋಜ, ವಿಜಯು ಸಾಯಿ ಮಾತನಾಡಿದರು.