ತಿರುವನಂತಪುರ: ಪೋಲೀಸರ ವಿರುದ್ಧ ದೂರು ದಾಖಲಿಸುವ ವಿಚಾರವಾಗಿ ಮಾನವ ಹಕ್ಕುಗಳ ಆಯೋಗ ಸರ್ಕಾರದಿಂದ ವಿವರಣೆ ಕೇಳಿದೆ.
ಈ ಕುರಿತು ಪರಿಶೀಲನೆ ನಡೆಸಿ ರಾಜ್ಯ ಪೋಲೀಸ್ ಮುಖ್ಯಸ್ಥರಿಗೆ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆಂಟನಿ ಡೊಮಿನಿಕ್ ಸೂಚಿಸಿರುವರು.
ಲಂಚ ಕೇಳಿದಾಗ ಎಲ್ಲಿ ದೂರು ಕೊಡಬೇಕು ಎಂಬುದು ಬಹುತೇಕರಿಗೆ ಗೊತ್ತು. ಆದರೆ ಪೋಲೀಸರ ವಿರುದ್ಧ ಎಲ್ಲಿ ದೂರು ದಾಖಲಿಸಬೇಕು ಎಂಬುದು ಹಲವರಿಗೆ ತಿಳಿದಿಲ್ಲ. ಪೋಲೀಸ್ ಅಧಿಕಾರಿಗಳ ವಿರುದ್ಧ ಮಾನವ ಹಕ್ಕುಗಳ ಆಯೋಗ ಮತ್ತು ಪೋಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಬಹುದು. ಈ ಕಚೇರಿಗಳು ಮತ್ತು ಸಿಬ್ಬಂದಿಗಳ ವಿಳಾಸಗಳನ್ನು ಪ್ರದರ್ಶಿಸುವ ಅಗತ್ಯವಿದೆ.