ಬದಿಯಡ್ಕ: ಮುಂಡಿತ್ತಡ್ಕದ ಶ್ರೀ ಮಹಾವಿಷ್ಣು ಭಜನಾ ಸಂಘದ 32ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀ ಮಹಾವಿಷ್ಣು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಭಜನಾ ಮಂದಿರದ ಪ್ರಧಾನ ಅರ್ಚಕ ಭಾಸ್ಕರ ಪೂಜಾರಿ ಅವರು ಆಮಂತ್ರಣ ಪತ್ರಿಕೆಯನ್ನು ಭಜನಾ ಸಂಘದ ಆಧ್ಯಕ್ಷರಿಗೆ ನೀಡುವ ಮೂಲಕ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯ ಈಶ್ವರ ಟೈಲರ್ ಉಪಸ್ಥಿತರಿದ್ದರು. ಭಜನಾ ಸಂಘದ ಪ್ರಧಾನ ಕಾರ್ಯದರ್ಶಿ ಪುನೀತ್ ಸ್ವಾಗತಿಸಿ, ಶಾಂತಕುಮಾರ್ ವಂದಿಸಿದರು.