ಶಬರಿಮಲೆ: ನಿಲಕ್ಕಲ್-ಪಂಪಾ ಸೇವೆಯಲ್ಲಿ ಸಂಚರಿಸುವ ಬಹುತೇಕ ಬಸ್ ಗಳಿಗೆ ವಿಮೆ ಇಲ್ಲ ಎಂಬ ಅಂಶ ಬಹಿರಂಗಗೊಂಡಿದೆ.
ಯಾತ್ರಾರ್ಥಿಗಳು ನಿಲಕ್ಕಲ್‍ನಿಂದ ಪಂಪಾಕ್ಕೆ ಮತ್ತು ಹಿಂತಿರುಗಲು ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಅವಲಂಬಿಸಿದ್ದಾರೆ. ಪಂಪಾದಿಂದ ನಿಲಕ್ಕಲ್‍ಗೆ 18 ಕಿಮೀ ಪ್ರಯಾಣಕ್ಕೆ ಕೆಎಸ್‍ಆರ್‍ಟಿಸಿ ಅಯ್ಯಪ್ಪವ್ರತಧಾರಿಗಳಿಂದ 50 ರೂ. ದರ ಪಡೆಯುತ್ತದೆ. ಶಬರಿಮಲೆ ಭೇಟಿಯ ವೇಳೆ ಪಂಪಾ ಮತ್ತು ನಿಲಕ್ಕಲ್‍ನಿಂದ ತೆಗೆದ ಬಸ್‍ಗಳ ದೃಶ್ಯಗಳು ಮತ್ತು 'ಎಂ ಪರಿವಾಹನ್' (mPಚಿಡಿivಚಿhಚಿಟಿ) ನಿಂದ ತೆಗೆದ ಬಸ್‍ಗಳ ವಿಮೆ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಆರ್.ಟಿ.ಐ ಕಾರ್ಯಕರ್ತ ಪಿ ರಾಜೀವ್ ಅವರು ಸರ್ಕಾರದ ಅಸಡ್ಡೆಯನ್ನು ಹಂಚಿಕೊಂಡಿದ್ದಾರೆ. ಹೀಗಾಗುತ್ತಿದೆ ಎಂದು ಕೇರಳಸ್ಸೆರಿ ಪಂಚಾಯತ್ ಸದಸ್ಯರೊಬ್ಬರು ಆರೋಪಿಸಿದ್ದಾರೆ
ವಿಮೆ ಇಲ್ಲದ ವಾಹನಗಳನ್ನು ರಸ್ತೆಯಲ್ಲಿ ಓಡಿಸುವುದು ಅಪರಾಧವಾಗಿದ್ದು, ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ವಿಮೆ ಸೌಲಭ್ಯ ಲಭಿಸುವುದಿಲ್ಲ.
ಇದು ಶಬರಿಮಲೆ ಮಾರ್ಗವಾಗಿ ಸಂಚರಿಸುವ ಕೆಎಸ್‍ಆರ್‍ಟಿಸಿ ಬಸ್‍ಗಳ ಪರಿಸ್ಥಿತಿಯಾಗಿದ್ದು, ಕೇರಳದ ಎಲ್ಲಾ ಕೆಎಸ್‍ಆರ್‍ಟಿಸಿ ಬಸ್‍ಗಳ ವಿಮೆ ಸ್ಥಿತಿಯನ್ನು ಪರಿಶೀಲಿಸುವ ಅವಶ್ಯಕತೆಯನ್ನು ಮುಂದಿರಿಸಿದೆ.