ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ದೀಪೆÇೀತ್ಸವದ ಸುವರ್ಣಮಹೋತ್ಸವ ಹಾಗೂ ಅಖಂಡ ಭಜನಾ ಸಂಕೀರ್ತನಾ ಮತ್ತು ತತ್ವಮಸಿ ಅನ್ನದಾನ ಮಂಟಪದ ಉದ್ಘಾಟನಾ ಸಮಾರಂಭ ನಡೆಯಿತು.
ಮುಂಬಯಿ ಹೇರಂಭಾ ಇಂಡಸ್ಟ್ರೀಸ್ ಅಧ್ಯಕ್ಷ ಸದಾಶಿವ ಕೆ.ಶೆಟ್ಟಿ ಕುಳೂರು ಕನ್ಯಾನ ಇವರು ಮಂಟಪವನ್ನು ಉದ್ಘಾಟಿಸಿದರು. ಸಭೆಯಲ್ಲಿ ಭವಾನಿ ಗ್ರೂಪ್ ಆಫ್ ಕಂಪೆನಿಯ ಅಧ್ಯಕ್ಷ ಕುಸುಮೋದರ ಡಿ.ಶೆಟ್ಟಿ ಚೆಲ್ಲಡ್ಕ, ದಡ್ಡಂಗಡಿ ಅಧ್ಯಕ್ಷತೆ ವಹಿಸಿದ್ದರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ನಾರಾಯಣ ಹೆಗ್ಡೆ, ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಆಡಳಿತ ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ, ಮುಳಿಂಜ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷ ಮುಳಿಂಜ ಹರಿನಾಥ ಭಂಡಾರಿ, ಚಂದ್ರಹಾಸ ಆಳ್ವ ಮುಂಬಯಿ, ರಾಜರಾಮ ಶೆಟ್ಟಿ ಉಪ್ಪಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಿವಿಲ್ ಇಂಜಿನಿಯರ್ ಗುರುಪ್ರಸಾದ್ ಕೋಡಿಬೈಲ್ ಇವರನ್ನು ಸನ್ಮಾನಿಸಲಾಯಿತು. ಗುರುಸ್ವಾಮಿ ಕುಟ್ಟಿಕೃಷ್ಣನ್, ಹಿರಿಯ ಸದಸ್ಯ ಕೊರಗಪ್ಪ ಬೇರಿಕೆ, ಅಯ್ಯಪ್ಪ ಸೇವಾ ಸಮಿತಿಯ ಹಿರಿಯ ಪದಾಧಿಕಾರಿ ಯು.ಎಂ ಭಾಸ್ಕರ ಇವರನ್ನು ಗೌರವಿಸಲಾಯಿತು. ಭಾಸ್ಕರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು. ಮಂದಿರದ ಕಾರ್ಯದರ್ಶಿ ಶಿವಾನಂದ ಸ್ವಾಗತಿಸಿ, ಕಮಲಾಕ್ಷ ಐಲ್ ವಂದಿಸಿದರು.