HEALTH TIPS

ಕೇರಳ ಪ್ಲಸ್ ವನ್ ಸುಧಾರಣಾ ಪರೀಕ್ಷೆಗೆ ಅವಕಾಶ: ಸರ್ಕಾರದಿಂದ ಸುಹಚನೆ


            ತಿರುವನಂತಪುರ:  2021 ರ ಪ್ರಥಮ ವರ್ಷದ ಹೈಯರ್ ಸೆಕೆಂಡರಿ / ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ ಸುಧಾರಣಾ ಪರೀಕ್ಷೆ(imprument) ಬರೆಯಲು ಅವಕಾಶ ನೀಡಲಾಗಿದೆ.  ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
             ಕೋವಿಡ್ 19 ಸಾಂಕ್ರಾಮಿಕ ಮತ್ತು ನೈಸರ್ಗಿಕ ವಿಕೋಪಗಳ ಕಾರಣ, ಮೊದಲ ವರ್ಷದ ಹೈಯರ್ ಸೆಕೆಂಡರಿ / ವೊಕೇಶನಲ್ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳು ನೇರವಾಗಿ ಅಧ್ಯಯನ ಚಟುವಟಿಕೆಗಳಿಗೆ ಶಾಲೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.  ಕಡಿಮೆ ಅವಧಿಯಲ್ಲಿ ಸಾಕಷ್ಟು ಅಧ್ಯಯನ ಮಾಡಲು ಅಸಾಧ್ಯವಾಯಿತು.  ಈ ಕಾರಣದಿಂದ ಸುಧಾರಣಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
          ಸುಧಾರಣಾ ಪರೀಕ್ಷೆಗೆ ಅವಕಾಶಕ್ಕಾಗಿ ಕೆಎಸ್‌ಟಿಎ, ಎಸ್‌ಎಫ್‌ಐ  ಮತ್ತು ಇತರ ವಿದ್ಯಾರ್ಥಿ  ಸಂಘಟನೆಗಳು ಬೇಡಿಕೆ ಇರಿಸಿತ್ತು.   ಹಲವಾರು ವಿದ್ಯಾರ್ಥಿಗಳು ಖುದ್ದಾಗಿ ಮತ್ತು ದೂರವಾಣಿ ಮೂಲಕ ಸಮಸ್ಯೆಯನ್ನು ತಿಳಿಸಿದ್ದರು.  ಈ ಬಗ್ಗೆ ಸಚಿವರ ಮಟ್ಟದಲ್ಲೂ ಪರಿಶೀಲನೆ ನಡೆದಿದೆ.  ಹೊಸ ಆದೇಶವು ಸಾರ್ವಜನಿಕ ಹಿತಾಸಕ್ತಿಯನ್ನೂ ಗಣನೆಗೆ ತೆಗೆದುಕೊಂಡು ನಿರ್ಧರಿಸಲಾಗಿದೆ ಎಂದು ಸಚಿವ  ಶಿವಂಕುಟ್ಟಿ ಸ್ಪಷ್ಟಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries