ನವದೆಹಲಿ: ಅಸ್ತಿತ್ವದಲ್ಲಿರುವ ಲಸಿಕೆಗಳು ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ವಿರುದ್ಧ ಕೆಲಸ ಮಾಡುವುದಿಲ್ಲ ಎಂಬುದನ್ನು ಸೂಚಿಸಲು ಯಾವುದೇ ಪುರಾವೆಗಳು ಇಲ್ಲ. ಆದರೆ, ಲಸಿಕೆ ಪರಿಣಾಮಕಾರಿತ್ವ ಕಡಿಮೆ ಆಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.
ನವದೆಹಲಿ: ಅಸ್ತಿತ್ವದಲ್ಲಿರುವ ಲಸಿಕೆಗಳು ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ವಿರುದ್ಧ ಕೆಲಸ ಮಾಡುವುದಿಲ್ಲ ಎಂಬುದನ್ನು ಸೂಚಿಸಲು ಯಾವುದೇ ಪುರಾವೆಗಳು ಇಲ್ಲ. ಆದರೆ, ಲಸಿಕೆ ಪರಿಣಾಮಕಾರಿತ್ವ ಕಡಿಮೆ ಆಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.
ಗುರುವಾರ ಕರ್ನಾಟಕದಲ್ಲಿ ಎರಡು ಓಮೈಕ್ರಾನ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ಹೊಸ ರೂಪಾಂತರದ ಕುರಿತ ಸಾಮಾನ್ಯ ಪ್ರಶ್ನೆಗಳನ್ನು (ಎಫ್‌ಎಕ್ಯು) ಪಟ್ಟಿ ಮಾಡಿರುವ ಕೇಂದ್ರ ಸರ್ಕಾರ, ಅದಕ್ಕೆ ಉತ್ತರಗಳನ್ನೂ ನೀಡಿದೆ.
ಅಸ್ತಿತ್ವದಲ್ಲಿರುವ ಲಸಿಕೆಗಳು ಓಮೈಕ್ರಾನ್ ರೂಪಾಂತರದ ವಿರುದ್ಧ ಕಾರ್ಯನಿರ್ವಹಿಸುತ್ತವೆಯೇ ಎಂಬುದಕ್ಕೆ ಉತ್ತರಿಸಿರುವ ಸಚಿವಾಲಯವು, 'ಅಸ್ತಿತ್ವದಲ್ಲಿರುವ ಲಸಿಕೆಗಳು ಓಮೈಕ್ರಾನ್ ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ. ಸ್ಪೈಕ್ ಜೀನ್‌ನಲ್ಲಿ ಗುರುತಿಸಲಾಗಿರುವ ಕೆಲವು ರೂಪಾಂತರಗಳು ಲಸಿಕೆಗಳ ಪರಿಣಾಮಾರಿತ್ವವನ್ನು ಕಡಿಮೆ ಮಾಡಬಹುದು," ಎಂದು ಹೇಳಿದೆ.
ಕೋವಿಡ್ ಸೋಂಕಿನ ಮೂರನೇ ತರಂಗದ ಸಾಧ್ಯತೆಯ ಕುರಿತು ಹೇಳಿರುವ ಸಚಿವಾಲಯವು, 'ದಕ್ಷಿಣ ಆಫ್ರಿಕಾದ ಹೊರಗಿನ ದೇಶಗಳಲ್ಲೂ ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಅದರ ಗುಣಲಕ್ಷಣಗಳನ್ನು ಗಮನಿಸಿದರೆ, ಇದು ಭಾರತ ಸೇರಿದಂತೆ ಹೆಚ್ಚಿನ ದೇಶಗಳಿಗೆ ಹರಡುವ ಸಾಧ್ಯತೆಯಿದೆ. ಆದರೂ ಪ್ರಕರಣಗಳ ಹೆಚ್ಚಳದ ಪ್ರಮಾಣ ಮತ್ತು ರೋಗದ ತೀವ್ರತೆ ಇನ್ನೂ ಸ್ಪಷ್ಟವಾಗಿಲ್ಲ' ಎಂದು ಹೇಳಿದೆ.
ಪ್ರಸ್ತುತ ಇರುವ ರೋಗನಿರ್ಣಯ ವಿಧಾನಗಳು ಓಮೈಕ್ರಾನ್ ಅನ್ನು ಪತ್ತೆಹಚ್ಚಬಹುದೇ ಎಂಬ ಪ್ರಶ್ನೆಗೆ, ಸಾರ್ಸ್ ಕೋವ್-2 ಪತ್ತೆಗೆ ಅಂಗೀಕರಿಸಲ್ಪಟ್ಟ ಮತ್ತು ಸಾಮಾನ್ಯವಾಗಿ ಬಳಸುವ ರೋಗನಿರ್ಣಯದ ವಿಧಾನವೆಂದರೆ ಆರ್‌ಟಿಪಿಸಿಆರ್ ಮಾತ್ರವೇ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಎಂದಿನಂತೆ ವ್ಯಕ್ತಿಗತ ಅಂತರ ಕಾಪಾಡುವಂತೆಯು, ಶುಚಿತ್ವ ಕಾದುಕೊಳ್ಳುವಂತೆಯೂ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆಯೂ ಆರೋಗ್ಯ ಇಲಾಖೆ ಸೂಚಿಸಿದೆ.