HEALTH TIPS

ಕನ್ನಡ ಹೋರಾಟಗಾರ ಬಿ.ಪುರುಷೋತ್ತಮ ಅವರಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಪ್ರಶಸ್ತಿ

                                      

               ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು  ಕನ್ನಡ ಹೋರಾಟಗಾರ ಕಯ್ಯಾರ ಕಿಂಞ್ಞಣ್ಣ ರೈ,  ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಕನ್ನಡ ಹೋರಾಟಗಾರರು,  ಸಂಸ್ಥೆಗಳಿಗೆ  ನೀಡುವ ಒಂದು ಲಕ್ಷ ನಗದಿನೊಂದಿಗಿರುವ ರಾಜ್ಯ ಪ್ರಶಸ್ತಿಗೆ ಕ್ರಮವಾಗಿ ಕಾಸರಗೋಡಿನ ಹಿರಿಯ ಕನ್ನಡ ಹೋರಾಟಗಾರ ಬಿ. ಪುರುಷೋತ್ತಮ ಹಾಗೂ ಕರ್ನಾಟಕದ ವಿದ್ಯಾವರ್ಧಕ ಸಂಘವನ್ನು ಆಯ್ಕೆ ಮಾಡಿದೆ.

          ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಭಾ.ಆ.ಸೇ (ನಿ.) , ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ಪೆÇ್ರ. ಮಲ್ಲೆಪುರಂ ವೆಂಕಟೇಶ್, ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಡಾ, ವಿಜಯಲಕ್ಷ್ಮಿ ಬಾಳೆಕುಂದ್ರಿ, ಕಾಸರಗೋಡಿನ  ಡಾ. ರತ್ನಾಕರ ಮಲ್ಲಮೂಲೆ, ಪೆÇ್ರ. ಗುರುಲಿಂಗಪ್ಪ ದಬಾಲೆ, ಅಕ್ಕಲಕೋಟೆ  ಅವರನ್ನೊಳಗೊಂಡ ಸಮಿತಿ  ಈ ಆಯ್ಕೆ ನಡೆಸಿದೆ.

                ಬಿ ಪುರುಷೋತ್ತಮ ಅವರು ಕಾಸರಗೋಡಿನ ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ಮೀಸಲಿಟ್ಟು ತುಡಿಯುತ್ತಿರುವ ಹಿರಿಯ ಚೇತನ. ಕಾಸರಗೋಡಿನ ಸರ್ವೋತೋಮುಖ ಅಭಿವೃದ್ಧಿಯನ್ನು ಲಕ್ಷ್ಯವಾಗಿರಿಸಿಕೊಂಡು ಕೇರಳ ಸರ್ಕಾರ ಡಾ. ಪ್ರಭಾಕರನ್ ಆಯೋಗವನ್ನು ಕಾಸರಗೋಡಿಗೆ ಕಳಿಸಿಕೊಟ್ಟಾಗ ಆಯೋಗದ ಜತೆಗೆ ಪುರುಷೋತ್ತಮ ಅವರು ಮಾತನಾಡಿ, ಕನ್ನಡ ಭಾಷಾ ಅಲ್ಪಸಂಖ್ಯಾಕರಿಗೆ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಲು, ದುಡಿದಿದ್ದಾರೆ. ಅಲ್ಲದೆ,  ಕಾಸರಗೋಡಿನಲ್ಲಿ ಮಲಯಾಳ ಕಡ್ಡಾಯ ಆದೇಶ ಬಂದಾಗ, ಜನರನ್ನು ಒಗ್ಗೂಡಿಸಿ ನ್ಯಾಯಕ್ಕಾಗಿ ಇತರ ಕನ್ನಡ ಸಂಸ್ಥೆಗಳೊಂದಿಗೆ ಹೋರಾಡಿದ್ದಾರೆ.

                  ಕಸಾಪ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕರ ಸಂಘದ ಗೌರವ, ಕನ್ನಡ ಭವನ ಈ ಮುಂತಾದ ಸಂಘಸಂಸ್ಥೆಗಳ ಆದರ ಗೌರವಗಳು ಲಭಿಸಿವೆ.  ಕರ್ನಾಟಕದ ಏಕೀಕರಣ ಹೋರಾಟದಿಂದ ತೊಡಗಿ ಇವತ್ತಿನವರೆಗೂ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ದುಡಿಯುತ್ತಿರುವ ಧಾರವಾಡ ವಿದ್ಯಾವರ್ಧಕ ಕನ್ನಡ ಸಂಘಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಹೋರಾಟಗಾರ್ತಿ  ಜಯದೇವಿ ತಾಯಿ ಲಿಗಾಡೆ ಅವರ ಹೆಸರಲ್ಲಿ ಕೊಡಮಾಡುವ  ರಾಜ್ಯ ಪ್ರಶಸ್ತಿ ಲಭಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries