ನವದೆಹಲಿ: ಭಾರತೀಯ ರೈಲ್ವೆಯಲ್ಲಿನ ಯುವ ಅಧಿಕಾರಿಗಳು, ಚಿಂತನಾಶೀಲರಾಗಿ, ಭವಿಷ್ಯದ ಚಿಂತನೆಗಳೊಂದಿಗೆ ಬರುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕಿವಿಮಾತು ಹೇಳಿದ್ದಾರೆ. ರೈಲ್ವೆ ಮಂಡಳಿಯಲ್ಲಿ ಮುಖ್ಯಸ್ಥ ಅಥವಾ ಸದಸ್ಯರಂತಹ ದೊಡ್ಡ ಸ್ಥಾನ ತಲುಪುವ ಹೊತ್ತಿಗೆ ರೈಲ್ವೆಯನ್ನು ಹೇಗೆ ನೋಡಲು ಬಯಸುತ್ತೀರಿ ಎಂದು ಅವರು ಯುವ ಅಧಿಕಾರಿಗಳನ್ನು ಕೇಳಿದರು.
ದೆಹಲಿ-ರೆವಾರಿ ಸೆಕ್ಷನ್ ನಲ್ಲಿ ಭಾನುವಾರ ಪರಿಶೀಲನೆ ನಡೆಸಿದ ವೈಷ್ಣವ್, ರೈಲ್ವೆಗಾಗಿ ಚಿಂತನೆ ಆರಂಭಿಸುವಂತೆ ಹೇಳುವುದರೊಂದಿಗೆ ಯುವ ಅಧಿಕಾರಿಗಳಲ್ಲಿ ಸ್ಫೂರ್ತಿ ತುಂಬಿದರು. ರೈಲ್ವೆಯನ್ನು ಯಾರು ನಡೆಸಬೇಕು ಮತ್ತು ಅದರ ಭವಿಷ್ಯ ಏನು ಎಂಬುದರ ಬಗ್ಗೆ ನೀವುಗಳೆ ನಿರ್ಧರಿಸಬೇಕು ಎಂದರು.
ರೈಲ್ವೆಯಲ್ಲಿ ಕಡಿಮೆ ವೆಚ್ಚದಲ್ಲಿ ಉನ್ನತ ಮಟ್ಟದ ಸೌಕರ್ಯ ಒದಗಿಸುವಂತೆ ಮತ್ತು ಪ್ರಯಾಣಿಕರಿಗೆ ಕೈಗೆಟುಕುವಂತಹ ಹೊಸ ಐಡಿಯಾಗಳೊಂದಿಗೆ ಪರಿಶೀಲಿಸಿದ ಸಚಿವರು, ಭವಿಷ್ಯದಲ್ಲಿ ರೈಲ್ವೆ ಮಂಡಳಿಯಲ್ಲಿ ಉನ್ನತ ಹುದ್ದೆ ತಲುಪಿದಾಗ ರೈಲ್ವೆಯನ್ನು ಹೇಗೆ ಮುನ್ನಡೆಸಲು ಬಯಸುತ್ತಿರಿ ಎಂಬುದರ ಬಗ್ಗೆ ಈಗಿನಿಂದಲೇ ಯೋಚಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ರೈಲ್ವೆ ಅಧಿಕಾರಿಗಳ ವಾಟ್ಸಾಪ್ ಗ್ರೂಪ್ ನಲ್ಲಿ ಈ ಸಂದೇಶವನ್ನು ಕಳುಹಿಸುವಂತೆ ಅಧಿಕಾರಿಯೊಬ್ಬರಿಗೆ ಸಚಿವರು ಸೂಚಿಸಿದರು.