ತಿರುವನಂತಪುರ: ರಾಜ್ಯದಲ್ಲಿ ಇಂದು ಮತ್ತಿಬ್ಬರು ಓಮಿಕ್ರಾನ್ ಖಚಿತಪಟ್ಟಿದೆ. ಇದರೊಂದಿಗೆ ಕೇರಳದಲ್ಲಿ ಸೋಂಕಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಯುಎಇಯಿಂದ ಆಗಮಿಸಿದ ದಂಪತಿಗಳಲ್ಲಿ ಈ ರೋಗ ದೃಢಪಟ್ಟಿದೆ.
68 ವರ್ಷದ ಪತಿ ಮತ್ತು 67 ವರ್ಷದ ಪತ್ನಿ ಡಿಸೆಂಬರ್ 8 ರಂದು ರಾಜ್ಯಕ್ಕೆ ಆಗಮಿಸಿದ್ದು, ಅವರಿಗೆ ಓಮಿಕ್ರಾನ್ ಖಚಿತಪಟ್ಟಿದೆ. ಶಾರ್ಜಾದಿಂದ ವಿಮಾನದಲ್ಲಿ ಕೇರಳಕ್ಕೆ ಆಗಮಿಸಿದ್ದರು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅವರು ಯುಎಇ ಹೈ-ರಿಸ್ಕ್ ಪಟ್ಟಿಯಲ್ಲಿಲ್ಲದ ಕಾರಣ ಸ್ವಯಂ-ಮೇಲ್ವಿಚಾರಣೆಯಲ್ಲಿದ್ದರು.
ಸ್ವಯಂ-ಮೇಲ್ವಿಚಾರಣೆಯಲ್ಲಿದ್ದ ವೇಳೆ ದಂಪತಿಗಳಿಗೆ ಕೋವಿಡ್ ರೋಗಲಕ್ಷಣ ಕಂಡುಬಂತು. ಬಳಿಕ ನಡೆಸಿದ ಪರೀಕ್ಷೆಯಲ್ಲಿ ಕೊರೋನಾ ದೃಢಪಟ್ಟಿದೆ. ನಂತರದ ಜೀನೋಮ್ ಪರೀಕ್ಷೆಯು ಓಮಿಕ್ರಾನ್ ರೂಪಾಂತರವನ್ನು ಬಹಿರಂಗಪಡಿಸಿತು.
68 ವರ್ಷದ ಆರಂಭಿಕ ಸಂಪರ್ಕ ಪಟ್ಟಿಯಲ್ಲಿ ಆರು ಜನರು ಸೇರಿದ್ದಾರೆ. ಅವರ ಪತ್ನಿಯ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಒಬ್ಬರಿದ್ದಾರೆ. ವಿಮಾನದಲ್ಲಿ ಒಟ್ಟು 54 ಪ್ರಯಾಣಿಕರಿದ್ದರು. ಸೋಂಕಿತರೊಂದಿಗೆ ನಿಕಟ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಪರೀಕ್ಷಿಸಲಾಗುವುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.