ಕಣ್ಣೂರು: ತಲಶ್ಶೇರಿಯಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ. ಕಣ್ಣೂರು ಜಿಲ್ಲಾಧಿಕಾರಿಗಳು ತಲಶ್ಶೇರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಘೋಷಿಸಿದ್ದಾರೆ. ಇಂದಿನಿಂದ ಆರು ದಿನದವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ. ಜನರು ಗುಂಪು ಸೇರಲು ಅವಕಾಶವಿರುವುದಿಲ್ಲ.
ಇಂದು ಸಂಜೆ ತಲಶ್ಶೇರಿಯಲ್ಲಿ ಹಿಂದುತ್ವ ಅಭಿಮಾನಿಗಳು |ಶ|ಕ್ತಿ ಪ್ರದರ್ಶನ ಕಾರ್ಯಕ್ರಮ ಘೋಷಿಸಿದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಪ್ರತಿಭಟನೆ ಮತ್ತು ಘರ್ಷಣೆಗಳನ್ನು ನಡೆಸುತ್ತಿದ್ದಾರೆ. ಆರೆಸ್ಸೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಹತ್ಯೆಗೈಯ್ಯುತ್ತಿದ್ದು ಇದನ್ನು ಖಂಡಿಸಿ ಇಂದು ಸಂಜೆ ಶಕ್ತಿ ಪ್ರದರ್ಶನಕ್ಕೆ ಕರೆ ನೀಡಲಾಗಿತ್ತು.
ನಿನ್ನೆ ತಲಶ್ಶೇರಿಯಲ್ಲಿ ಎಸ್‍ಡಿಪಿಐ ಕೂಡ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯುದ್ದಕ್ಕೂ ಆರ್‍ಎಸ್‍ಎಸ್ ಕಾರ್ಯಕರ್ತರು |ಆಯುಸ್ಸು ಪೂರ್ತಿಗೊಳಿಸದೆ ಸಾಯಬಾರದು ಎಂಬ ಘೋಷಣೆಗಳು ಮೊಳಗಿದವು. ನಂತರ ಆರ್‍ಎಸ್‍ಎಸ್ ಕಾರ್ಯಕರ್ತರು ಜಮಾಯಿಸುತ್ತಿದ್ದಂತೆ ಎಸ್‍ಡಿಪಿಐ ಸದಸ್ಯರು ಹೆದರಿ ಕಾಲ್ಕಿತ್ತರು. ಪೋಲೀಸರು ಮಧ್ಯ ಪ್ರವೇಶಿಸಿ ಘರ್ಷಣೆ ತಪ್ಪಿಸಿದರು.
ಹೆಚ್ಚುತ್ತಿರುವ ದ್ವೇಷ ಪ್ರಚಾರ ಮತ್ತು ಹಿಂಸಾತ್ಮಕ ರಾಜಕೀಯದ ವಿರುದ್ಧ ಸಂಘಪರಿವಾರದ ಸಂಘಟನೆಗಳು ಇಂದು ಸಂಜೆ ಪ್ರತಿಭಟನೆಗೆ ಕರೆ ನೀಡಿವೆ. ಇದಕ್ಕೂ ಮುನ್ನ ತಲಶ್ಶೇರಿಯಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ.