ನವದೆಹಲಿ: ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಹೆಚ್ಚಿನ ಕೊರೊನಾ ಪಾಸಿಟಿವಿಟಿ ದರಗಳನ್ನು ಹೊಂದಿರುವ ಕ್ಲಸ್ಟರ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಸ್ಥಳಗಳಲ್ಲಿ ಪರೀಕ್ಷಾ ಧನಾತ್ಮಕತೆಯ ದರವು 10 ಪ್ರತಿಶತದವರೆಗೆ ಇದೆ.
ಕೇರಳದಲ್ಲಿ ನಿನ್ನೆ 4995 ಮಂದಿಗೆ ಕೊರೊನಾ ದೃಢಪಟ್ಟಿದೆ. ದೇಶದಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ಕೇರಳದಿಂದ ದೃಢಪಟ್ಟಿರುವುದು ಆತಂಕಕಾರಿ ಸಂಗತಿಯಾಗಿದೆ. ರಾಜಧಾನಿ ಸೇರಿದಂತೆ ಕೇರಳದ ಹಲವು ಜಿಲ್ಲೆಗಳಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.
ಯುಕೆಯಿಂದ ಆಗಮಿಸಿದ ಕೋಝಿಕ್ಕೋಡ್‌ನ ಆರೋಗ್ಯ ಕಾರ್ಯಕರ್ತರೊಬ್ಬರು ಕೊರೋನಾದ ಎರಡನೇ ಬಾರಿಗೆ ತಪಾಸಣೆಯ ಸಂದರ್ಭದಲ್ಲಿ ಕೋವಿಡ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಅವರ ಜೊಲ್ಲಿನ ಮಾದರಿಗಳನ್ನು ಶೀಘ್ರದಲ್ಲೇ ಜೆನೆಟಿಕ್ ಪರೀಕ್ಷೆಗೆ ಕಳುಹಿಸಲಾಗುವುದು. ಆರೋಗ್ಯ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಇತರ ಇಬ್ಬರು ಜನರ ಮೇಲೂ ನಿಗಾ ಇರಿಸಲಾಗಿದೆ. ಆರೋಗ್ಯ ಕಾರ್ಯಕರ್ತರ ಸಂಪರ್ಕ ಪಟ್ಟಿಯನ್ನು ಇಂದು ಪ್ರಕಟಿಸಲಾಗುವುದು.