HEALTH TIPS

ಲಿಂಗ-ಸಮಾನತೆ ಏಕರೂಪದ ಬದಲಾವಣೆ ಸ್ವೀಕಾರಾರ್ಹ: ಸಚಿವ ಶಿವಂಕುಟ್ಟಿ; ಅಂದು ಪ್ಯಾಂಟಿನಲ್ಲಿ ಬಂದಿದ್ದರೆ ಫೆÇೀಟೋ ಬರುತ್ತಿರಲಿಲ್ಲ: ಇಸ್ಲಾಮಿ ಸಂಘಟನೆಗಳಿಂದ ಲೇವಡಿ

                                        

                  ತಿರುವನಂತಪುರ: ಶಾಲಾ ಸಮವಸ್ತ್ರದಲ್ಲಿ ಲಿಂಗ ಸಮಾನತೆಯ ವಿಚಾರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಬಲಿಸಲಿದೆ ಎಂದು ಸಾರ್ವಜನಿಕ ಶಿಕ್ಷಣ ಸಚಿವ ವಿ ಶಿವಂಕುಟ್ಟಿ ಹೇಳಿದ್ದಾರೆ. ಬಾಲುಶ್ಸೆರಿ ಸರ್ಕಾರಿ ಬಾಲಕಿಯರ ಎಚ್‍ಎಸ್‍ಎಸ್ ಶಾಲೆಯ ಸಾಮಾನ್ಯ ನಿರ್ಧಾರದ ಕ್ರಮವನ್ನು ಸಚಿವರು ಸ್ವಾಗತಿಸಿರುವರು. 

                    ಸಮಾಜದಲ್ಲಿನ ಪ್ರಗತಿಪರ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾತ್ರ ಶೈಕ್ಷಣಿಕ ಪ್ರಕ್ರಿಯೆಯು ಮುಂದುವರಿಯುತ್ತದೆ. ಆದರೆ ಯಾವುದನ್ನೂ ಹೇರಬಾರದು ಎಂಬುದು ನ್ಯಾಯ.  ಇದರಲ್ಲಿ ಯಾರನ್ನೂ ಬಲವಂತ ಮಾಡುತ್ತಿಲ್ಲ. ಈ ಎಲ್ಲ ವಿಷಯಗಳನ್ನು ಸಮುದಾಯ ಚರ್ಚಿಸಲಿ.

                  ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕಿದೆ. ಪಠ್ಯಕ್ರಮ ಸುಧಾರಣೆಗೆ ಸಂಬಂಧಿಸಿದಂತೆ ಲಿಂಗ ಸಮಾನತೆ ಮತ್ತು ಲಿಂಗ ಅರಿವಿನ ಆಧಾರದ ಮೇಲೆ ಪಠ್ಯಪುಸ್ತಕಗಳನ್ನು ಆಡಿಟ್ ಮಾಡಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ.

                ಇದೇ ವೇಳೆ, ಮಕ್ಕಳ ಸಮವಸ್ತ್ರದ ಬದಲಾವಣೆಯನ್ನು ಸಚಿವರು ಒಪ್ಪಿಕೊಂಡ ಬಳಿಕ ತೀವ್ರವಾದಿ ಇಸ್ಲಾಮಿಸ್ಟ್ ಗಳು ಸಚಿವರ ಹೇಳಿಕೆಯನ್ನು ಟೀಕಿಸಿದರು. ಈ ಘೋಷಣೆ ಮಾಡಿದ ಸಚಿವರು ಯಾವ ರೀತಿಯ ಬಟ್ಟೆ ಧರಿಸುತ್ತಾರೆ? ಪ್ಯಾಂಟ್ ಕೇರಳದ ಉಡುಗೆ ಶೈಲಿಯಲ್ಲ. ನಮ್ಮ ಪ್ಯಾಂಟ್ ಮತ್ತು ಶರ್ಟ್‍ಗಳನ್ನು ಏಕರೂಪವಾಗಿಸಿದರೆ ಲಿಂಗ ಸಮಾನತೆಯನ್ನು ಸಾಧಿಸಬಹುದು ಮತ್ತು ಕೇರಳದ ಪರಂಪರೆಯನ್ನು ಉಳಿಸಬಹುದು ಎಂಬ ಕಾಮೆಂಟ್‍ಗಳೂ ಇವೆ.

                     ವಿಧಾನಮಂಡಲದಲ್ಲೂ ಪ್ಯಾಂಟ್ ಕಡ್ಡಾಯಗೊಳಿಸಬೇಕು. ನೀವು ಪ್ಯಾಂಟಿನಲ್ಲಿ ಬಂದಿದ್ದರೆ ಆಗ ಇಂತಹ ಫೆÇೀಟೋ ಇರುತ್ತಿರಲಿಲ್ಲ ಎಂದು ವಿಧಾನ¸ಭೆ ಗದ್ದಲ ಘಟನೆಯನ್ನು ಉಲ್ಲೇಖಿಸಿ Àವ್ಯಂಗ್ಯವಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries