HEALTH TIPS

COVID-19: ಸೂಜಿ ಇಲ್ಲದ ಲಸಿಕೆ ZyCoV-D 3 ಮಾರುಕಟ್ಟೆಗೆ ಬರೋದಕ್ಕೆ ರೆಡಿ, ಪಡೆಯೋದು ಹೇಗೆ? ಫುಲ್ ಡೀಟೆಲ್ಸ್

               ಕೋವಿಡ್-19 ವಿರುದ್ಧ ಕೋವ್ಯಾಕ್ಸಿನ್‌ (Covaxin)ಭಾರತದ ಮೊದಲ ಸ್ಥಳೀಯ ಲಸಿಕೆಯಾಗಿತ್ತು(Vaccine) ಮತ್ತು ಈಗ ನಾವು ಎರಡನೇ ಸ್ಥಳೀಯ ಲಸಿಕೆಯನ್ನು ಹೊಂದಿದ್ದೇವೆ. ಅದು ಶೀಘ್ರದಲ್ಲೇ 7 ಭಾರತೀಯ(Seven Indian states) ರಾಜ್ಯಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ. ZyCoV-D ಲಸಿಕೆ, ಆಗಸ್ಟ್‌ನಲ್ಲೇ ಡ್ರಗ್ಸ್ ಕಂಟ್ರೋಲರ್ (Drugs Controller)ಜನರಲ್ ಆಫ್ ಇಂಡಿಯಾದಿಂದ ಅಧಿಕೃತ ಅನುಮೋದನೆ ಪಡೆದುಕೊಂಡಿದೆ. ಆದರೆ, ಇದರ ಒಂದು ಪ್ರಮುಖ ವಿಶಿಷ್ಟತೆ ಎಂದರೆ, ಅದು ಸೂಜಿ ರಹಿತ ಲಸಿಕೆಯ (Needle-less jab)ಡೋಸ್‌ ಆಗಿದೆ.

                                        12-19 ವರ್ಷಗಳ ವಯಸ್ಸಿನ ಯುವಕರಿಗೂ ಲಸಿಕೆ..!
           ZyCoV-D ಲಸಿಕೆಯು ಅದರ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವವರೆಗೆ ವಯಸ್ಕರಿಗೆ ಮಾತ್ರ ನೀಡಲಾಗುತ್ತದೆ. ಬಳಿಕ ಇದನ್ನು ಹದಿಹರೆಯದವರಿಗೂ ವಿಸ್ತರಿಸಲಾಗುವುದು ಎಂದು ಮಹಾರಾಷ್ಟ್ರದ ಕಲ್ಯಾಣ್‌ನ ಫೋರ್ಟಿಸ್ ಆಸ್ಪತ್ರೆಯ ಚೀಫ್ ಇಂಟೆನ್ಸಿವಿಸ್ಟ್ ಡಾ. ಸಂದೀಪ್ ಪಾಟೀಲ್ ಹೇಳಿದ್ದಾರೆ.
            ಭಾರತದ ಮೊದಲ ಸೂಜಿ ರಹಿತ ಲಸಿಕೆ
ZyCoV-D ಸೂಜಿ- ರಹಿತ ಲಸಿಕೆ ಆಗಿದ್ದು, ಇದನ್ನು ಸಾಂಪ್ರದಾಯಿಕ ಸಿರಿಂಜ್‌ಗಳ ಬದಲಿಗೆ ಸೂಜಿ-ಮುಕ್ತ ಲೇಪಕವನ್ನು ಬಳಸಿ ನಿರ್ವಹಿಸಲಾಗುತ್ತದೆ. ಇದು 3-ಡೋಸ್ ಲಸಿಕೆಯಾಗಿದೆ, ಇದರ ಎರಡನೇ ಮತ್ತು ಮೂರನೇ ಡೋಸ್‌ಗಳನ್ನು ಮೊದಲನೆ ಲಸಿಕೆ ಪಡೆದುಕೊಂಡ 28 ಮತ್ತು 56 ದಿನಗಳ ನಂತರ ತೆಗೆದುಕೊಳ್ಳಬೇಕು. ವರದಿಗಳ ಪ್ರಕಾರ, ಲಸಿಕೆಯ ಸಿಂಗಲ್ ಡೋಸ್ ಅನ್ನು ಜೆಟ್ ಅಪ್ಲಿಕೇಟರ್ ಮತ್ತು ಜಿಎಸ್‌ಟಿ ವೆಚ್ಚ ಒಳಗೊಂಡಂತೆ 376 ರೂ. ಆಗಿದೆ.

            ಈ ಹಿನ್ನೆಲೆ 3-ಡೋಸ್ ಲಸಿಕೆಯ ಬೆಲೆಯನ್ನು 1,128 ರೂ.ವೆರೆಗೆ ತೆಗೆದುಕೊಂಡು ಹೋಗುತ್ತದೆ. ಝೈಡಸ್ ಕ್ಯಾಡಿಲಾ ಕಂಪನಿಯ ಈ ಲಸಿಕೆ ಇನ್ನೂ, ರಾಷ್ಟ್ರೀಯ ವ್ಯಾಕ್ಸಿನೇಷನ್ ಡ್ರೈವ್‌ನ ಭಾಗವಾಗಿರುವುದಿಲ್ಲ ಎನ್ನಲಾಗಿದೆ.ಆದರೆ, ಮೊದಲು 7 ರಾಜ್ಯಗಳಲ್ಲಿ ಈ ಲಸಿಕೆ ಲಭ್ಯವಿರುತ್ತದೆ ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
               ZyCoV-D DNA-ಪ್ಲಾಸ್ಮಿಡ್ ಲಸಿಕೆಯಾಗಿದೆ
ZyCoV-D ಪ್ಲಾಸ್ಮಿಡ್ ಡಿಎನ್‌ಎ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾದ ವಿಶ್ವದ ಎಲ್ಲಿಯಾದರೂ ವಾಣಿಜ್ಯಿಕವಾಗಿ ಪರಿಚಯಿಸಲಾಗುತ್ತಿರುವ ಮೊದಲ COVID-19 ಲಸಿಕೆ ಅಭ್ಯರ್ಥಿಯಾಗಿದೆ. ಡಿಎನ್‌ಎ-ಪ್ಲಾಸ್ಮಿಡ್ ಲಸಿಕೆ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು, ಹೆಚ್ಚಿನ ಲಸಿಕೆಗಳನ್ನು ಸಾಂಕ್ರಾಮಿಕ ಏಜೆಂಟ್‌ನ ದುರ್ಬಲಗೊಂಡ ಅಥವಾ ಕೊಲ್ಲಲ್ಪಟ್ಟ ರೂಪವನ್ನು ಬಳಸಿ ತಯಾರಿಸಲಾಗುತ್ತದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು.

              ಆದರೆ, ಈ ಲಸಿಕೆಯ ಸಂದರ್ಭದಲ್ಲಿ, ಪ್ರತಿಜನಕಗಳ ವಂಶವಾಹಿಗಳನ್ನು ಹೊಂದಿರುವ ಡಿಎನ್ಎ ತುಂಡನ್ನು ದೇಹದಲ್ಲಿ ಚುಚ್ಚಲು ಬಳಸಲಾಗುತ್ತದೆ. ಪ್ರತಿಜನಕದ ವಿರುದ್ಧ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಇದು ದೇಹಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ ರೋಗಕಾರಕವು ದಾಳಿ ಮಾಡಿದಾಗ, ದೇಹವು ನಂತರ COVID ಎದುರಿಸಲು ನಿರ್ದಿಷ್ಟ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ತಿಳಿದುಕೊಂಡಿದೆ.

                       3 ಪ್ರಯೋಗದಲ್ಲಿ ಈ ಲಸಿಕೆ 66.66% ದಕ್ಷತೆ
       ಇದು ಹದಿಹರೆಯದ ಜನಸಂಖ್ಯೆಯಲ್ಲಿ (12-18 ವರ್ಷಗಳು) ಪರೀಕ್ಷಿಸಲ್ಪಟ್ಟ ದೇಶದ ಮೊದಲ ಲಸಿಕೆಯಾಗಿದೆ. ZyCoV-D ಲಸಿಕೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಹಂತ 3 ಕ್ಲಿನಿಕಲ್ ಪ್ರಯೋಗಗಳಲ್ಲಿ 66.66% ಪ್ರಾಥಮಿಕ ಪರಿಣಾಮಕಾರಿತ್ವವನ್ನು ತೋರಿಸುತ್ತದೆ.

          ಶೇಖರಣಾ ವಿಚಾರದಲ್ಲೂ ಈ ಲಸಿಕೆ ಬಗ್ಗೆ ಹೆಚ್ಚು ಆತಂಕ ಬೇಡ. ಏಕೆಂದರೆ, ಈ ಲಸಿಕೆ 3 ತಿಂಗಳ ಕಾಲ ಕೋಣೆಯ ಉಷ್ಣಾಂಶದಲ್ಲಿ ಸ್ಥಿರವಾಗಿರುತ್ತದೆ. ಇದು ಅಲ್ಟ್ರಾ-ಕೋಲ್ಡ್ ಸ್ಟೋರೇಜ್ ಸಿಸ್ಟಮ್‌ಗಳ ಅಗತ್ಯವಿರುವ mRNA ಲಸಿಕೆಗಳಿಗಿಂತ ಭಿನ್ನವಾಗಿರುತ್ತದೆ.

                            ದಕ್ಷತೆ
              ಈ ಪ್ರಯೋಗದ ಸಮಯದಲ್ಲಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಈ ಲಸಿಕೆಯು ಈಗಾಗಲೇ ದೃಢವಾದ ರೋಗನಿರೋಧಕ ಶಕ್ತಿ, ಸಹಿಷ್ಣುತೆ ಮತ್ತು ಸುರಕ್ಷತಾ ಪ್ರೊಫೈಲ್ ಅನ್ನು ಅಡಾಪ್ಟೀವ್‌ ಹಂತ I/II ಕ್ಲಿನಿಕಲ್ ಪ್ರಯೋಗಗಳಲ್ಲಿ ಪ್ರದರ್ಶಿಸಿದೆ ಎಂದು ಕಲ್ಯಾಣ್‌ನ ಫೋರ್ಟಿಸ್ ಆಸ್ಪತ್ರೆಯ ಮುಖ್ಯ ಇಂಟೆನ್ಸಿವಿಸ್ಟ್ ಡಾ. ಸಂದೀಪ್ ಪಾಟೀಲ್ ಹಂಚಿಕೊಂಡಿದ್ದಾರೆ. ದೇಶಾದ್ಯಂತ ಹರಡಿರುವ 50ಕ್ಕೂ ಹೆಚ್ಚು ಕ್ಲಿನಿಕಲ್ ಸೈಟ್‌ಗಳಲ್ಲಿ ಪ್ರಯೋಗಗಳನ್ನು ನಡೆಸಲಾಗಿರುವುದರಿಂದ ಈ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಕಾರ್ಯನಿರ್ವಹಿಸುತ್ತದೆ.

             ಮತ್ತು COVID19ನ ಎರಡನೇ ತರಂಗದ ಉತ್ತುಂಗದಲ್ಲಿ ಹೊಸ ರೂಪಾಂತರಿತ ತಳಿಗಳ ವಿರುದ್ಧ ಲಸಿಕೆ ಪರಿಣಾಮಕಾರಿತ್ವವನ್ನು ತೋರಿಸಿದೆ, ವಿಶೇಷವಾಗಿ ಡೆಲ್ಟಾ ರೂಪಾಂತರ ಎಂದು ಅದು ಹೇಳಿದೆ. ಡೇಟಾವು ಮೂರು-ಡೋಸ್ ಕಟ್ಟುಪಾಡುಗಳೊಂದಿಗೆ ಸಮಾನವಾದ ಇಮ್ಯುನೊಜೆನಿಸಿಟಿಯನ್ನು ತೋರಿಸುತ್ತದೆ. ಆದ್ದರಿಂದ, ಎರಡು-ಡೋಸ್ ಲಸಿಕೆಗೂ ಅನುಮೋದನೆಯನ್ನು ಸಹ ನಿರೀಕ್ಷಿಸಲಾಗಿದೆ. ಆದರೂ, ತಜ್ಞರ ಸಮಿತಿಯು ಆ ಕುರಿತು ಹೆಚ್ಚಿನ ಡೇಟಾ ಪರಿಶೀಲಿಸುತ್ತದೆ ಎನ್ನಲಾಗಿದೆ.
                                      ಜೆನೆಟಿಕ್ ಲಸಿಕೆಗಳು ಎಷ್ಟು ಸುರಕ್ಷಿತ..?
          ಜೆನೆಟಿಕ್ ಲಸಿಕೆಗಳನ್ನು ಬಳಕೆಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವುಗಳು ವೈರಸ್‌ನ ಲೈವ್ ಘಟಕಗಳನ್ನು ಬಳಸಿ ಉತ್ಪಾದಿಸುವುದಿಲ್ಲ, ಆದ್ದರಿಂದ ಸೋಂಕಿನ ಅಪಾಯವಿಲ್ಲ. ಅಂತಹ ಲಸಿಕೆಗಳನ್ನು ತಯಾರಿಸಲು ನಿಜವಾದ ವೈರಸ್‌ನ ಅನುವಂಶಿಕ ಮಾಹಿತಿಯನ್ನು ಬಳಸಲಾಗುತ್ತದೆ. Zydus Cadila ಸಂಸ್ಥೆ ಜೊತೆಗೆ ಜಗತ್ತಿನಾದ್ಯಂತ ಹಲವಾರು ಇತರ ಔಷಧೀಯ ದೈತ್ಯರು DNA ಲಸಿಕೆಗಳನ್ನು ಅನ್ವೇಷಿಸುತ್ತಿದ್ದಾರೆ. ಈ ಪೈಕಿ, ಜಪಾನಿನ ಜೈವಿಕ ತಂತ್ರಜ್ಞಾನ ಕಂಪನಿ AnGes ಮತ್ತು US ಮೂಲದ Inovio ಕೆಲವು ಪ್ರಮುಖ ಹೆಸರುಗಳಾಗಿವೆ.


            
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries