ತಿರುವನಂತಪುರಂ: ಕೆಎಸ್‌ಆರ್‌ಟಿಸಿ ಮಾಜಿ ನೌಕರರ ಪಿಂಚಣಿಗೆ ವಿಶೇಷ ನೆರವು ನೀಡಲು `146 ಕೋಟಿ ನೀಡಲು ನಿರ್ಧರಿಸಲಾಗಿದೆ. ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದು ಮೊತ್ತ ಪಾವತಿಸಲಾಗುತ್ತದೆ. ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಮಾತನಾಡಿ, ಈ ಹಿಂದಿನ ಆರ್ಥಿಕ ನೆರವಿನ ಜೊತೆಗೆ ಕೆಎಸ್ ಆರ್ ಟಿಸಿಗೆ ವಿಶೇಷ 15 ಕೋಟಿ ರೂ. ನೀಡಲಾಗುವುದೆಂದು ತಿಳಿಸಿರುವರು.
ಪಿಂಚಣಿ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಕೆಎಸ್‌ಆರ್‌ಟಿಸಿ ಪಿಂಚಣಿದಾರರ ಸಂಘಟನೆ ಸೆಕ್ರರಿಯೇಟ್ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು. ನವೆಂಬರ್‌ನಲ್ಲಿ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸುವುದರೊಂದಿಗೆ ನವೆಂಬರ್ 19 ರಂದು ಮುಷ್ಕರ ಪ್ರಾರಂಭವಾಯಿತು. ಈ ಹಿನ್ನೆಲೆಯಲ್ಲಿ ವಿಶೇಷ ನೆರವು ನೀಡಲು ಸರ್ಕಾರ ನಿರ್ಧರಿಸಿದೆ.