ದೆಹಲಿ: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕನೂಲ್ ಬಳಿ ಪತನಗೊಂಡು, ಸಿಡಿಎಸ್ ಬಿಪಿನ್ ರಾವತ್ ದಂಪತಿ ಸೇರಿ 13 ಮಂದಿ ಮೃತಪಟ್ಟ ಆಘಾತಕಾರಿ ಸುದ್ದಿ ದೇಶಕ್ಕೆ ಬರಸಿಡಿಲಿನಂತೆ ಬಂದೆರಗಿದೆ.
Mi-17V-5 ಹೆಲಿಕಾಪ್ಟರ್ ರಷ್ಯಾ ದೇಶದ ಸಂಸ್ಥೆಯೊಂದು ತಯಾರಿಸಿದ ಮಿಲಿಟರಿ ಸಾರಿಗೆ ಹೆಲಿಕಾಪ್ಟರ್. ಇದನ್ನು ಅತ್ಯಾಧುನಿಕ ಮಿಲಿಟರಿ ಸಾರಿಗೆಗಳಲ್ಲಿ ಒಂದು. ಸಿಬ್ಬಂದಿ, ಸರಕು ಮತ್ತು ಉಪಕರಣಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಹೆಲಿಕಾಪ್ಟರ್ನ ಗರಿಷ್ಠ ವೇಗ ಗಂಟೆಗೆ 250 ಕಿಮೀ. ಗರಿಷ್ಠ 6,000 ಮೀಟರ್ ಎತ್ತರದಲ್ಲಿ ಹಾರಬಲ್ಲದು. ಉಷ್ಣವಲಯ, ಸಾಗರವಲಯ, ಮರುಭೂಮಿ, ಪರ್ವತ ವಲಯ ಸೇರಿದಂತೆ ಎಲ್ಲ ಪ್ರತಿಕೂಲ ವಾತಾವರಣದಲ್ಲೂ, ಭಾರೀ ರಕ್ಷಾಕವಚ ರಕ್ಷಣೆಯೊಂದಿಗೆ ಹಗಲು-ರಾತ್ರಿ ಕಾರ್ಯನಿರ್ವಹಿಸಬಲ್ಲದು.
ಬಿಪಿನ್ ರಾವತ್ ದಂಪತಿ2008ರ ಡಿಸೆಂಬರ್ನಲ್ಲಿ ರಷ್ಯಾದ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆ ರೋಸೊಬೊರಾನ್ ಎಕ್ಸ್ಪೋರ್ಟ್(Rosoboronexport) ಜತೆ ಒಟ್ಟು 80 Mi-17V-5 ಹೆಲಿಕಾಪ್ಟರ್ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ರಷ್ಯಾದ ಅಂಗಸಂಸ್ಥೆಯಾದ ಕಜನ್ ಹೆಲಿಕಾಪ್ಟರ್ಗಳನ್ನು ತಯಾರಿಸಿ ಕೊಟ್ಟಿದೆ. ಇದು 2013ರಲ್ಲಿ ಪೂರ್ಣಗೊಂಡಿತ್ತು. ಹೆಲಿಕಾಪ್ಟರ್ನಲ್ಲಿ ಭಾರೀ ಶಸ್ತ್ರಸಜ್ಜಿತ ಕಾಕ್ಪಿಟ್ ಮತ್ತು ಶಾಖವನ್ನು ಹುಡುಕುವ ಕ್ಷಿಪಣಿಗಳ ವಿರುದ್ಧ ಆತ್ಮರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. Mi-17V-5 ಹೆಲಿಕಾಪ್ಟರ್ನ ಗರಿಷ್ಠ ಟೇಕ್-ಆಫ್ ತೂಕ 13,000 ಕೆಜಿ. 36 ಸಶಸ್ತ್ರ ಸೈನಿಕರನ್ನು ಸಾಗಿರುವ ಸಾಮಾರ್ಥ್ಯ ಇದಕ್ಕಿದೆ. ಇದು ಮಾರ್ಗದರ್ಶನವಿಲ್ಲದ ರಾಕೆಟ್, ಫಿರಂಗಿಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳನ್ನು ಸಾಗಿಸಬಲ್ಲದು. ಆನ್ಬೋರ್ಡ್ನಲ್ಲಿರುವ ಶಸ್ತ್ರಾಸ್ತ್ರವು ಶತ್ರು ಸಿಬ್ಬಂದಿ, ಶಸ್ತ್ರಸಜ್ಜಿತ ವಾಹನ, ಭೂ ಆಧಾರಿತ ಗುರಿಗಳನ್ನು ತೆಗೆದುಕೊಳ್ಳಲು ಅನುಮತಿಸುತ್ತದೆ. ಈ ಹೆಲಿಕಾಪ್ಟರ್ಗಳಿಗೆ ಸ್ಟಾರ್ಬೋರ್ಡ್ ಸ್ಲೈಡಿಂಗ್ ಡೋರ್, ಪ್ಯಾರಾಚೂಟ್ ಉಪಕರಣಗಳು, ಸರ್ಚ್ಲೈಟ್ ಮತ್ತು ತುರ್ತು ಫ್ಲೋಟೇಶನ್ ವ್ಯವಸ್ಥೆಯೂ ಇದೆ.
ವಿಐಪಿಗಳು ಪ್ರಯಾಣಿಸುವ ಹೆಲಿಕಾಪ್ಟರ್ ಮೇಲೆ ಭದ್ರತೆ ದೃಷ್ಟಿಯಿಂದ ಹದ್ದಿನ ಕಣ್ಣಿಟ್ಟಿರಲಾಗುತ್ತೆ. ದಟ್ಟ ಮಂಜು ಆವರಿಸಿದ್ದರೂ ಮೊದಲೇ ಪರಿಶೀಲನೆ ನಡೆಸಿರಲಾಗುತ್ತೆ. ಪ್ರತಿಕೂಲ ಹವಮಾನ ಇದ್ದಾಗ ಹೆಲಿಕಾಪ್ಟರ್ ಹೋಗೋಕೆ ಅವಕಾಶ ಕೊಡುವ ಸಾಧ್ಯತೆ ಕಡಿಮೆ. ಹಾರಟಕ್ಕೂ ಮುನ್ನವೇ ಏರ್ಪೋರ್ಟ್ ಇಂಜಿನಿಯರ್ಗಳು ಹೆಲಿಕಾಪ್ಟರ್ ಅನ್ನು ಪರಿಶೀಲನೆ ನಡೆಸಿರುತ್ತಾರೆ. ಆದರೂ ಹೆಲಿಕಾಪ್ಟರ್ ಏಕಾಏಕಿ ಪತನ ಆಗಿದ್ದೇಕೆ? ತಾಂತ್ರಿಕ ದೋಷ ಏನಾದರೂ ಸಂಭವಿಸಿತ್ತೇ? ಪೈಲಟ್ನ ನಿರ್ಲಕ್ಷವೇ? ದಟ್ಟಮಂಜು ಆವರಿಸಿತ್ತೇ? ಎಂಬುದಕ್ಕೆಲ್ಲ ತನಿಖೆ ಬಳಿಕವಷ್ಟೇ ಉತ್ತರ ಸಿಗಬೇಕಿದೆ.