ಮಂಜೇಶ್ವರ: ಅರಿಬೈಲು ನಾಗಬ್ರಹ್ಮ ದೇವರ ಕಂಬಳ ಭಾನುವಾರ ಸಾಂಪ್ರದಾಯಿಕ ವಿಧಾನಗಳೊಂದಿಗೆ ಜರಗಿತು. ಕ್ಷೇತ್ರದ ತಂತ್ರಿ ರಾಧಾಕೃಷ್ಣ ಅರಿನಾಯರು ಉಪವಾಸ ಕೋಣಗಳನ್ನು ಇಳಿಸುವ ಮೂಲಕ ಚಾಲನೆಯನ್ನು ನೀಡಿದರು. ಗೋಪಾಲ ಶೆಟ್ಟಿ ಅರಿಬೈಲು ಕಂಬಳ ನಿರ್ವಹಣೆಯನ್ನು ಮಾಡಿದರು.
ಪಕೀರ ಮೂಲ್ಯ ಕಟ್ಟೆ, ರಮೇಶ ಮೂಲ್ಯ ಕಟ್ಟೆ ತೀರ್ಪುಗಾರರಾಗಿ ಭಾಗವಹಿಸಿದರು.ರಾತ್ರಿ ನಾಗಬ್ರಹ್ಮ ದೇವರ ಉತ್ಸವ ನಡೆಯಿತು. ಅರಿಬೈಲು ನಾಗಬ್ರಹ್ಮ ದೇವರ ಕಂಬಳ ಮತ್ತು ವಾರ್ಷಿಕ ಉತ್ಸವವು ಜರಗಿತು.ಕಂಬಳದಲ್ಲಿ ತಲಪಾಡಿ ಪಂಜಾಲ ಕೀರ್ತನ್ ರವೀಂದ್ರ ಪಕಳರ ಕೋಣಗಳು ಪ್ರಥಮ ಸ್ಥಾನ ಗಳಿಸಿತು. ಮಿಕ್ಕುಳಿದಂತೆ
2. ಕಡಂಬಾರು ಕೆಳಗಿನಮನೆ ಸಂಜೀವ ಮಾಧವ ಮಡಿವಾಳ ದ್ವಿತೀಯ.
3. ಕಾಜೂರು ಪಾಪಿಲ ಇಸುಬು ಬ್ಯಾರಿ ತೃತೀಯ.
4. ನೇಗಿಲು ವಿಭಾಗದಲ್ಲಿ ಮುಲ್ಲೇರಿಯ ಎಡಪಾಡಿ ನಾರಾಯಣ ಶೆಟ್ಟಿ ಪ್ರಥಮ.
5. ಕಾಡೂರು ಬೀಡು ಮಾರಪ್ಪ ಭಂಡಾರಿ.
6. ಪಟ್ಟತ್ತ ಮುಗೇರು ಕೃಷ್ಣ ಶೆಟ್ಟಿ.
7. ಆರೀಸ್ ಸೊಂಕಲ್.
8. ಮುಲ್ಲೇರಿಯ ಕರ್ಲೆ ಕಟ್ಟದಮನೆ ಬಾಲಕೃಷ್ಣ ಶೆಟ್ಟಿ.
9. ಪಜಿಂಗಾರು ಕಾಢಂಬೆಟ್ಟು
ಆನಂದ ಮೊಗೇರ.
10. ಕುಂಜತ್ತೂರು ಹೊಸಮನೆ ನಾoಞ ಶೆಟ್ಟಿ.
11. ಪಾವೂರು ಪೆÇಯ್ಯೆ ಫ್ರೆಂಡ್ಸ್.
12. ಉಪವಾಸದ ಕೋಣಗಳು ಪಾವೂರು ಮೋನು ಬ್ಯಾರಿ.