ನವದೆಹಲಿ: ಹೆಚ್ಚು ಬೇಡಿಕೆಯಿರುವ ಎಚ್-1ಬಿ ವೀಸಾ ನೋಂದಣಿಯನ್ನು ಮಾರ್ಚ್ 1 ರಿಂದ ಪ್ರಾರಂಭ ಮಾಡಲಾಗುತ್ತದೆ ಹಾಗೂ ಮಾರ್ಚ್ 18, 2022 ರವರೆಗೆ ನೋಂದಣಿಗೆ ಅವಕಾಶ ನೀಡಲಾಗುತ್ತದೆ ಎಂದು ಅಮೆರಿಕ ಮಾಹಿತಿ ನೀಡಿದೆ. ಅರ್ಜಿದಾರರು ಮತ್ತು ಪ್ರತಿನಿಧಿಗಳು ಆನ್‌ಲೈನ್ ಮೂಲಕ ಎಚ್-1ಬಿ ವೀಸಾಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿದಾರರು ಮತ್ತು ಪ್ರತಿನಿಧಿಗಳು ಆನ್‌ಲೈನ್ ಮೂಲಕ ಎಚ್-1ಬಿ ವೀಸಾ ನೋಂದಣಿ ವ್ಯವಸ್ಥೆಯನ್ನು ಬಳಸಿಕೊಂಡು ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬಹುದು ಅಥವಾ ನೋಂದಣಿಯನ್ನು ಮಾಡಿಕೊಳ್ಳಬಹುದು ಎಂದು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು (ಯುಎಸ್‌ಸಿಐಎಸ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
"ಯುಎಸ್‌ಸಿಐಎಸ್ 2023ರ ಎಚ್-1ಬಿ ವೀಸಾಕ್ಕಾಗಿ ಲ್ಲಿಸಿದ ಪ್ರತಿ ನೋಂದಣಿಗೆ ದೃಢೀಕರಣ ಸಂಖ್ಯೆಯನ್ನು ನಿಯೋಜಿಸುತ್ತದೆ. ಈ ಸಂಖ್ಯೆಯನ್ನು ನೋಂದಣಿಗಳನ್ನು ಟ್ರ್ಯಾಕ್ ಮಾಡಲು ಮಾತ್ರ ಬಳಸಲಾಗುತ್ತದೆ. ನಿಮ್ಮ ನೋಂದಣಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು ಈ ಸಂಖ್ಯೆಯನ್ನು ಬಳಸಲಾಗುವುದಿಲ್ಲಮ," ಎಂದು ಮಾಹಿತಿ ನೀಡಿದೆ.ಆನ್‌ಲೈನ್ ಮೂಲಕ ನೋಂದವಣಿ ಮಾಡುವುದು ಎಲ್ಲಿ? "ನಿರೀಕ್ಷಿತ ಎಚ್-1ಬಿ ವೀಸಾದ ಅರ್ಜಿದಾರರು ಅಥವಾ ಅವರ ಪ್ರತಿನಿಧಿಗಳು ಆಯ್ಕೆ ಪ್ರಕ್ರಿಯೆಗಾಗಿ ಪ್ರತಿ ಫಲಾನುಭವಿಯನ್ನು ಆನ್‌ಲೈನ್ ಮೂಲಕ ನೋಂದಾವಣೆ ಮಾಡಿಕೊಳ್ಳಲು myUSCIS ಆನ್‌ಲೈನ್ ಸೈಟ್ ಅನ್ನು ಬಳಸಬೇಕಾಗುತ್ತದೆ. ಇನ್ನು ಪ್ರತಿ ನೋಂದಣಿಗೆ 10 ಡಾಲರ್ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ತಮ್ಮ ಸ್ವಂತ ನೋಂದಣಿಗಳನ್ನು ಸಲ್ಲಿಸುವ ಅರ್ಜಿದಾರರು "ನೋಂದಣಿದಾರ" (ಯುಎಸ್ ಉದ್ಯೋಗದಾತರು ಮತ್ತು ಯುಎಸ್ ಏಜೆಂಟ್‌ಗಳು, ಒಟ್ಟಾರೆಯಾಗಿ "ನೋಂದಣಿದಾರರು" ಎಂದು ಕರೆಯಲ್ಪಡುವವರು) ಖಾತೆಯನ್ನು ಬಳಸಬೇಕಾಗುತ್ತದೆ. ನೋಂದಣಿದಾರರು ಫೆ. 21 ರಂದು ಹೊಸ ಖಾತೆಗಳನ್ನು ರಚಿಸಲು ಸಾಧ್ಯವಾಗುತ್ತದೆ," ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. "ಪ್ರತಿನಿಧಿಗಳು ತಮ್ಮ ಖಾತೆಗಳಿಗೆ ಯಾವುದೇ ಸಮಯದಲ್ಲಿ ಬೇರೆಯವರ ನೋಂದಣಿ ಸೇರಿಸಬಹುದು. ಆದರೆ ಅವರ ಮಾಹಿತಿಯನ್ನು ನಮೂದಿಸಲು ಹಾಗೂ 10 ಡಾಲರ್ ಶುಲ್ಕದೊಂದಿಗೆ ನೋಂದಣಿಯನ್ನು ಸಲ್ಲಿಸಲು ಪ್ರತಿನಿಧಿಗಳು ಮತ್ತು ನೋಂದಣಿದಾರರು ಮಾರ್ಚ್ 1 ರವರೆಗೆ ಕಾಯಬೇಕು. ನಿರೀಕ್ಷಿತ ಅರ್ಜಿದಾರರು ಅಥವಾ ಅವರ ಪ್ರತಿನಿಧಿಗಳು ಹಲವು ಜನರ ನೋಂದಣಿಗಳನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಪ್ರತಿ ನೋಂದಣಿಗೆ ಪ್ರತ್ಯೇಕವಾಗಿ ಶುಲ್ಕವಿರುತ್ತದೆ," ಎಂದು ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ. ನಿರೀಕ್ಷಿತ ಅರ್ಜಿದಾರರನ್ನು ಮಾರ್ಚ್ 18 ರೊಳಗೆ ನೋಂದಣಿಗಳನ್ನು ಮಾಡಬೇಕಾಗಿದೆ.
ಎಚ್-1ಬಿ ವೀಸಾವು ವಲಸೆರಹಿತ ವೀಸಾ ಆಗಿದ್ದು, ಇದು ಯುಎಸ್ ಕಂಪನಿಗಳಿಗೆ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ. ಪ್ರತಿ ವರ್ಷ, ಯುಎಸ್ 65,000 ಹೊಸ ಎಚ್-1ಬಿ ವೀಸಾಗಳನ್ನು ನೀಡುತ್ತದೆ. ಯುಎಸ್ ಸ್ನಾತಕೋತ್ತರ ಪದವಿ ಹೊಂದಿರುವವರಿಗೆ ಇನ್ನೂ 20,000 ಕಾಯ್ದಿರಿಸಲಾಗಿದೆ. ಈ ವೀಸಾ ಕಾರ್ಯಕ್ರಮದ ಹೆಚ್ಚಿನ ಫಲಾನುಭವಿಗಳಲ್ಲಿ ಭಾರತೀಯರು ಸೇರಿದ್ದಾರೆ. ಪ್ರತಿ ವರ್ಷ ನೀಡಲಾಗುವ ಸುಮಾರು ಶೇಕಡ 70ರಷ್ಟು ವೀಸಾ ಭಾರತೀಯರು ಸ್ವೀಕರಿಸುತ್ತಾರೆ. ಇನ್ನು ಈ ಹಿಂದೆಯೇ ವಿಶೇಷ ವೃತ್ತಿಪರರು ( ಎಚ್-1ಬಿ ವೀಸಾ) ಟ್ರೈನಿ ಅಥವಾ ವಿಶೇಷ ಶಿಕ್ಷಣಕ್ಕೆ ಆಗಮಿಸುವವರು ( ಎಚ್-3 ವೀಸಾ) ಇಂಟರ್ ಕಂಪನಿ ವರ್ಗಾವಣೆದಾರರು (ಎಲ್ ವೀಸಾ) ಅಸಾಧಾರಣ ಸಾಮರ್ಥ್ಯ ಅಥವಾ ಸಾಧನೆ ಹೊಂದಿರುವವರು ( ಒ ವೀಸಾ) ಅಥ್ಲೆಟಿಕ್ಸ್ , ಕಲಾವಿದರು ಮತ್ತು ಎಂಟರ್ ಟ್ರೈನರ್ಸ್ ( ಪಿ ವೀಸಾ) ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ( ಕ್ಯೂ ವೀಸಾ) ಅರ್ಜಿದಾರರಿಗೆ ಡಿಸೆಂಬರ್ 31, 2022ರವರೆಗೂ ವೈಯಕ್ತಿಕ ಸಂದರ್ಶನಕ್ಕೆ ವಿನಾಯಿತಿ ನೀಡಲಾಗಿದೆ.