ನವದೆಹಲಿ: ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಈವರೆಗೂ ಸುಮಾರು 1.59 ಕೋಟಿ ತೆರಿಗೆದಾರರಿಗೆ ಸುಮಾರು 1.54 ಲಕ್ಷ ಕೋಟಿ ಮರುಪಾವತಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಗುರುವಾರ ಹೇಳಿದೆ.
ಇದು 2021-22 ರ ಮೌಲ್ಯಮಾಪನ ವರ್ಷದ (ಮಾರ್ಚ್ 31, 2021 ಕ್ಕೆ ಕೊನೆಗೊಂಡ ಹಣಕಾಸು ವರ್ಷ) 1.20 ಕೋಟಿ ಮರು ವಾ ವತಿ ಸೇರಿದಂತೆ ಒಳಗೊಂಡಿದ್ದು, ಇದರ ಮೊತ್ತ 23,406.28 ಕೋಟಿ ಆಗಿದೆ.
ಏಪ್ರಿಲ್ 1, 2021 ರಿಂದ ಜನವರಿ 10, 2022ರವರೆಗೆ 1.59 ಕೋಟಿಗೂ ಹೆಚ್ಚು ತೆರಿಗೆದಾರರು ಸುಮಾರು 1.54, 302 ಕೋಟಿ ಮರುಪಾವತಿಯನ್ನು ಸಿಬಿಡಿಟಿ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಇದರಲ್ಲಿ ಸುಮಾರು 1.56 ಕೋಟಿ ತೆರಿಗೆದಾರರಿಗೆ ರೂ.53,689 ಕೋಟಿ ವೈಯಕ್ತಿಕ ತೆರಿಗೆ ಮರುಪಾವತಿ ಮತ್ತು 2.21 ಲಕ್ಷ ವ್ಯವಹಾರಸ್ಥರಿಗೆ ಸುಮಾರು 1 ಲಕ್ಷ ಕೋಟಿ ಕಾರ್ಪೋರೇಟ್ ತೆರಿಗೆ ಮರುಪಾವತಿಯನ್ನು ಇದು ಒಳಗೊಂಡಿದೆ.
ವೈಯಕ್ತಿಕ ತೆರಿಗೆದಾರರಿಗೆ 2020-21ಆರ್ಥಿಕ ವರ್ಷದ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31, 2021ರವರೆಗೂ ಗಡುವು ನೀಡಲಾಗಿತ್ತು. ಕಾರ್ಪೋರೇಟ್ ತೆರಿಗೆ ದಾರರಿಗೆ ಮಾರ್ಚ್ 15, 2022 ಕಡೆಯ ದಿನವಾಗಿದೆ.