ಕೋಲ್ಕತ್ತಾ: 24 ಗಂಟೆಗಳ ಅವಧಿಯಲ್ಲಿ ಕೋಲ್ಕತ್ತಾದ ಮೂರು ವಿವಿಧ ಆಸ್ಪತ್ರೆಗಳ 100ಕ್ಕೂ ಅಧಿಕ ವೈದ್ಯರಿಗೆ ಕೋವಿಡ್-19 ದೃಢಪಟ್ಟಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.
ಕೋಲ್ಕತ್ತ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕನಿಷ್ಠ 70 ವೈದ್ಯರು, ಚಿತ್ತರಂಜನ್ ಸೇವಾ ಸದನ ಮತ್ತು ಕಾಳಿಘಾಟ್‌ನ ಶಿಶು ಸದನ ಆಸ್ಪತ್ರೆಯಲ್ಲಿ ತರಬೇತಿನಿರತ 24 ವೈದ್ಯರು ಹಾಗೂ ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆಯ 12 ಮಂದಿ ವೈದ್ಯರಿಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.