ತಿರುವನಂತಪುರ: ತಿರುವನಂತಪುರಂನ ಟ್ರಿವೆಂಡ್ರಾಂ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ವಿದ್ಯಾರ್ಥಿಗಳಲ್ಲಿ ದೊಡ್ಡ ಪ್ರಮಾಣದ ಕೊರೋನಾ ಸ್ಪೋಟ ಉಂಟಾಗಿದೆ. ಕಾಲೇಜಿನ 100 ಕ್ಕೂ ಹೆಚ್ಚು ಜನರಿಗೆ ರೋಗ ಪತ್ತೆಯಾಗಿದೆ. ಇದರೊಂದಿಗೆ ತರಗತಿಗಳನ್ನು ಆನ್‍ಲೈನ್‍ನಲ್ಲಿ ಮಾಡಲಾಯಿತು.
ಈ ವೇಳೆ ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳನ್ನು ಕೂಡಲೇ ಹಾಸ್ಟೆಲ್ ಖಾಲಿ ಮಾಡುವಂತೆ ಕಾಲೇಜು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದೇ ತಿಂಗಳ 14ರಂದು ಕಾಲೇಜಿನಲ್ಲಿ ಸಾಮೂಹಿಕ ಕೋವಿಡ್ ಪರೀಕ್ಷೆ ನಡೆಸಲು ಸಹ ನಿರ್ಧರಿಸಲಾಗಿದೆ.