ಸಿಯೋಲ್: ಯೂಟ್ಯೂಬ್ ನಲ್ಲಿ ಹೆಚ್ಚಿನ ವೀಕ್ಷಣೆ(views) ಪಡೆಯಲು ಜನರು ನಾನಾ ಕಸರತ್ತು ತಂತ್ರಗಳ ಮೊರೆ ಹೋಗುತ್ತಾರೆ. ವಿಶ್ವದಲ್ಲೇ 1000 ಕೋಟಿ (10 ಬಿಲಿಯನ್) views ಪಡೆದ ಮೊದಲ ಯೂಟ್ಯೂಬ್ ವಿಡಿಯೊ ಎನ್ನುವ ದಾಖಲೆ 'ಬೇಬಿ ಶಾರ್ಕ್ ಡ್ಯಾನ್ಸ್' ಎನ್ನುವ ವಿಡಿಯೋಗೆ ಪ್ರಾಪ್ತವಾಗಿದೆ.
ಬೇಬಿ ಶಾರ್ಕ್ ಡ್ಯಾನ್ಸ್ ಮಕ್ಕಳ ವಿಡಿಯೊ ಎನ್ನುವುದು ಅಚ್ಚರಿಯ ಸಂಗತಿ. 2016ರಲ್ಲಿ ಕೊರಿಯಾದ ಮ್ಯೂಸಿಕ್ ಬ್ಯಾಂಡ್ ಪಿಂಕ್ ಫಾಂಗ್ ಮಕ್ಕಳಿಗಾಗಿ ಆಲ್ಬಂ ಹಾಡುಗಳನ್ನು ನಿರ್ಮಿಸಿತ್ತು. ಅದರಲ್ಲಿ ಒಂದು ಹಾಡು 'ಬೇಬಿ ಶಾರ್ಕ್ ಡ್ಯಾನ್ಸ್'. ಜಗತ್ತಿನಾದ್ಯಂತ ಈ ಹಾಡು ವೈರಲ್ ಆಗಿ ಮೋಡಿ ಮಾಡಿತ್ತು.
ಅಚ್ಚರಿ ಎಂದರೆ ಜಗತ್ತಿನ ಒಟ್ಟು ಜನಸಂಖ್ಯೆ 7.8 ಬಿಲಿಯನ್, ಬೇಬಿ ಶಾರ್ಕ್ ಡ್ಯಾನ್ಸ್ ಆ ಸಂಖ್ಯೆಯನ್ನೂ ಮೀರಿಸಿದೆ.