ಬದಿಯಡ್ಕ: ಭಾರತೀಯ ಜನತಾ ಪಕ್ಷ ಬದಿಯಡ್ಕ ಪಶ್ಚಿಮ ವಿಭಾಗ ಸಮಿತಿ ವತಿಯಿಂದ ಉಚಿತ ಅಡುಗೆ ಅನಿಲ ಸಂಪರ್ಕದ ವಿತರಣಾ ಕಾರ್ಯಕ್ರಮ ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರ ಪರಿಸರದಲ್ಲಿ ಬುಧವಾರ ಜರಗಿತು.
ಕಾರ್ಯಕ್ರಮದಲ್ಲಿ ಬದಿಯಡ್ಕ ಪಶ್ಚಿಮ ವಿಭಾಗ ಸಮಿತಿಯ ಅಧ್ಯಕ್ಷೆ ಅಶ್ವಿನಿ ಭಟ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸಿ ಮಾತನಾಡಿದರು. ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಸದಸ್ಯೆ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜ ಭಟ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೌಮ್ಯ ಮಹೇಶ್, ಮಂಡಲ ಕರ್ಷಕ ಮೋರ್ಚಾದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬಾಲಸುಬ್ರಹ್ಮಣ್ಯ ಭಟ್, ನವೀನ್ ನೀರ್ಚಾಲು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ನಿಧನರಾದ ಸಾಯಿರಾಂ ಗೋಪಾಲ ಕೃಷ್ಣ ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. 100 ಮಂದಿ ಫಲಾನುಭವಿಗಳಿಗೆ ಈ ಸಂದರ್ಭ ಅಡುಗೆ ಅನಿಲ ಸ|ಂಪರ್ಕ ವಿತರಿಸಲಾಯಿತು. ಮಂಡಲ ಖಜಾಂಜಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ವಂದಿಸಿದರು.