HEALTH TIPS

ಒಂದು ನಿಮಿಷದಲ್ಲಿ 109 ಪುಷ್‌ಅಪ್‌- ಗಿನ್ನೆಸ್‌ ವಿಶ್ವ ದಾಖಲೆ ಪುಟ ಸೇರಿದ ಯುವಕ: ವಿಡಿಯೋ ಇಲ್ಲಿದೆ ನೋಡಿ

             ಇಂಫಾಲ : ಕೇವಲ ಒಂದೇ ಒಂದು ನಿಮಿಷದ ಅವಧಿಯಲ್ಲಿ ಮಣಿಪುರದ ಇಂಫಾಲ್‌ನ ಯುವಕನೊಬ್ಬ 109 ಪುಶ್​​​-ಅಪ್​​ ಹೊಡೆದು ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ್ದಾನೆ.

          ಮಣಿಪುರ ಅಜ್ಟೆಕ್ಸ್ ಸ್ಪೋರ್ಟ್ಸ್ ಸಂಸ್ಥೆ, ಇಂಫಾಲ್‌ನ ಅಜ್ಟೆಕ್ಸ್ ಫೈಟ್ ಸ್ಟುಡಿಯೋದಲ್ಲಿ ಆಯೋಜಿಸಿದ್ದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸ್ಪರ್ಧೆಯಲ್ಲಿ 24 ವರ್ಷದ ತೌನೋಜಮ್ ನಿರಂಜೋಯ್ ಸಿಂಗ್ ಎಂಬಾತ ಈ ದಾಖಲೆ ಬರೆದಿದ್ದಾನೆ.


             ಈ ಹಿಂದೆ ಒಂದು ನಿಮಿಷಕ್ಕೆ 105 ಪುಶ್‌ ಅಪ್‌ ಮಾಡಿರುವ ದಾಖಲೆ ಇತ್ತು. ಈ ದಾಖಲೆಯನ್ನು ತೌನೋಜಮ್‌ ಮುರಿದಿದ್ದಾನೆ.

              ವಿಡಿಯೋ ಇಲ್ಲಿದೆ ನೋಡಿ: ಒಂದೇ ನಿಮಿಷದಲ್ಲಿ ಅತೀ ಹೆಚ್ಚು ಪುಶ್​​-ಅಪ್​ ಮಾಡಿ ವಿಶ್ವ ದಾಖಲೆ ಮಾಡಿದ್ದು ಇದು ಅದ್ಭುತವಾಗಿದೆ. ಈತನ ಸಾಧನೆ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್​ ಮೂಲಕ ಅಭಿನಂದಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries