ಮಧೂರು: ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣ ಕಾರ್ಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಪೂಜ್ಯ ರಾಜರ್ಷಿ, ಪದ್ಮವಿಭೂಷಣ ಡಾ.ವೀರೇಂದ್ರ ಹೆಗ್ಗಡೆಯವರು ಯೋಜನೆ- ಪ್ರತಿಷ್ಠಾನದ ಚಟುವಟಿಕೆ ಬಗ್ಗೆ ಮೆಚ್ಚಿ, ಮಂಜೂರು ಮಾಡಿದ 10 ಲಕ್ಷ ರೂಪಾಯಿಗಳ ಡಿ.ಡಿ.ಯನ್ನು ಡಿ.ಹಷೇರ್ಂದ್ರ ಕುಮಾರ್ ರವರು ಶುಕ್ರವಾರ ಪ್ರತಿಷ್ಠಾನಕ್ಕೆ ಹಸ್ತಾಂತರಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಖಜಾಂಜಿ ಲಕ್ಷ್ಮೀನಾರಾಯಣ ತಂತ್ರಿ ಕಾವುಮಠ, ಲೇಖಕ, ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಸಂಘಟಕ, ಲೇಖಕ ಜಗದೀಶ ಕೆ. ಕೂಡ್ಲು ಉಪಸ್ಥಿತರಿದ್ದರು. ಯೋಜನೆಯ ಕುರಿತು ಆಸಕ್ತಿ ವಹಿಸಿದ ಹಷೇರ್ಂದ್ರ ಕುಮಾರ್ ಅವರು, ಗಡಿನಾಡಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣವಾಗಲಿ. ಈ ಮೂಲಕ ಗಡಿನಾಡು ಕಾಸರಗೋಡಿನಲ್ಲಿ ಕಲೆ- ಸಂಸ್ಕೃತಿ- ಸಾಹಿತ್ಯಗಳ ಬೆಳವಣಿಗೆಗೆ ಪೂರಕವಾಗಲಿ. ಸಾಹಿತ್ಯ, ಸಂಸ್ಕೃತಿಗಳು ಉಳಿಯುವಂತಾಗಲಿ ಎಂದು ಶುಭಹಾರೈಸಿದರು.