ಕಾಸರಗೋಡು: ಉದ್ಯಮ ವಲಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಜನರೊಂದಿಗೆ ಚರ್ಚಿಸುವ ನಿಟ್ಟಿನಲ್ಲಿ ಕೈಗಾರಿಕೆ-ಹುರಿಹಗ್ಗ ಹಾಗೂ ಕಾನೂನು ಖಾತೆ ಸಚಿವ ಪಿ.ರಾಜೀವ್ ಅವರು ನಡೆಸುವ ಮೀಟ್ ದಿ ಮಿನಿಸ್ಟರ್ ಕಾರ್ಯಕ್ರಮ ಕಾಸರಗೋಡು ಜಿಲ್ಲೆಯಲ್ಲಿ ಜ. 11ರಂದು ನಡೆಯಲಿದೆ. ಉದ್ಯಮ ವಲಯಕ್ಕೆ ಸಂಬಂಧಿಸಿದ ಸಲಹೆಗಳು, ದೂರುಗಳನ್ನು industriesksgd@gmail.com ಎಂಬ ಇ-ಮೈಲ್ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ(9847747025, 8921307823)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.