ಕಾಸರಗೋಡು: ಕ್ರೈಸ್ತ ಅಲ್ಪಸಂಖ್ಯಾತ ವಿಭಾಗದ ಸಮಸ್ಯೆಗಳ ಅಧ್ಯಯನಕ್ಕಾಗಿ ನಿಯೋಜಿಸಲಾಗಿರುವ ಜಸ್ಟಿಸ್ ಜಿ.ಬಿ ಕೋಶಿ ಕಮಿಶನ್‍ನ ಸಿಟ್ಟಿಂಗ್ ಜ. 12ರಂದು ಕಣ್ಣೂರು ಸರ್ಕಾರಿ ಅತಿಥಿಗೃಹದಲ್ಲಿ ನಡೆಯಲಿದೆ. ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯ ಅರ್ಹ ಸಮುದಾಯದವರಿಗೆ ಸಿಟ್ಟಿಂಗ್‍ನಲ್ಲಿ ಭಾಗವಹಿಸಬಹುದಾಗಿದೆ.
ಕೋವಿಡ್ ಮಾನದಂಡ ಪ್ರಕಾರ ಮೊದಲು ನೋಂದಾವಣೆ ನಡೆಸಿದ 50ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 2.30ರ ವರೆಗೆ ಸಿಟ್ಟಿಂಗ್ ನಡೆಯಲಿದ್ದು, 2020 ಅಕ್ಟೋಬರ್ 30ಕ್ಕೂ ಮೊದಲು ಮನವಿ ಸಲ್ಲಿಸಿದವರಿಗೆ ಪುರಾವೆಗಳನ್ನು ಹಾಜರುಪಡಿಸಲು ಅವಕಾಶ ಕಲ್ಪಿಸಲಾಗಿದೆ. ಸಿಟ್ಟಿಂಗ್‍ನಲ್ಲಿ ಭಾಗವಹಿಸುವವರು ಮುಂಚಿತವಾಗಿ ನೋಂದಾವಣೆ ನಡೆಸಬೇಕಾಗಿದೆ. ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ(484-2993148.)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.